ಹೆಚ್ಚಾದ ಈರುಳ್ಳಿ ದರ : ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್!!!

ನವದೆಹಲಿ: 

      ದೇಶಾದ್ಯಂತ ಹೆಚ್ಚಾಗುತ್ತಿರುವ ಈರುಳ್ಳಿ ದರಗಳನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಈರುಳ್ಳಿಯ ಎಲ್ಲ ಬಗೆಯ ತಳಿಗಳ ರಫ್ತನ್ನು ನಿರ್ಬಂಧಿಸಿ, ಕೂಡಲೇ ಜಾರಿಗೆ ಬರುವಂತೆ ಎಲ್ಲಾ ರೀತಿಯ ಈರುಳ್ಳಿ ರಪ್ತುನ್ನು ನಿಷೇಧಿಸಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಆದೇಶ ಹೊರಡಿಸಿದೆ.

      ಈ ಬಾರಿ ಮಳೆ ಹಾಗೂ ಬೆಲೆ ಏರಿಕೆ ಪರಿಣಾಮ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿಲ್ಲ. ಹಾಗಾಗೀ ಸರ್ಕಾರ ಈ ಕ್ರಮ ಕೈಗೊಂಡಿದೆ.

      ದೇಶಾದ್ಯಂತ ಉತ್ತಮವಾಗಿ ಈರುಳ್ಳಿ ಬೆಳೆಯಲಾಗಿದೆ .ಆದರೆ, ಈ ಬಾರಿ ಅತಿವೃಷ್ಟಿಯಿಂದಾಗಿ ಶೇ, 50 ರಷ್ಟು ಈರುಳ್ಳಿ ಬೆಳೆ ನಾಶವಾಗಿದೆ. ಮಹಾರಾಷ್ಟ್ರದಲ್ಲಿ ಮಳೆಯಿಂದ ಈರುಳ್ಳಿ ಆಮದಿಗೂ ಹೊಡೆತ ಬಿದ್ದಿದ್ದು, ಈರುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.ರಾಷ್ಟ್ರ ರಾಜಧಾನಿ ನವದೆಹಲಿ ಕೆಜಿ ಈರುಳ್ಳಿ ಬೆಲೆ 60 ರಿಂದ 80 ರೂಪಾಯಿ ಆಗಿದೆ. ಈ ಮಧ್ಯೆ ಹೆಚ್ಚಿನ ದರದಿಂದಾಗಿ ಗ್ರಾಹಕರಿಗೆ ಪರಿಹಾರ ನೀಡಲು, ಕೇಂದ್ರ ಸರ್ಕಾರ ದೇಶಾದ್ಯಂತ 50,000 ಟನ್ ಈರುಳ್ಳಿಯನ್ನು ತುರ್ತು ಪರಿಸ್ಥಿತಿ ನಿರ್ವಹಣೆಗಾಗಿ ದಾಸ್ತಾನು ಆಗಿ ಇಡಲಾಗಿದೆ.

     ಡಿಜಿಎಫ್ ಟಿಯು ವಾಣಿಜ್ಯ ಸಚಿವಾಲಯದ ಭಾಗವಾಗಿದ್ದು, ರಫ್ತು – ಆಮದು ಸಂಬಂಧಿತ ಸಂಗತಿಗಳನ್ನು ನೋಡಿಕೊಳ್ಳುತ್ತದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link
Powered by Social Snap