ನವದೆಹಲಿ:
ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲೋರ್ ಭೂಮಿಗೆ ವಾಪಸ್ ಆಗಲು ಅನುವು ಆಗುವಂತೆ ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ಉಡಾವಣೆ ಮಾಡಲಾಗಿದೆ.
ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ ನಾಲ್ವರು ಹೊಸ ಗಗನಯಾತ್ರಿಗಳಿನ್ನು ಹೊತ್ತು ಉಡಾವಣೆಗೊಂಡಿದೆ, ಅವರಿಬ್ಬರನ್ನು ಕರೆತರಬೇಕಿದ್ದ ಫಾಲ್ಕನ್ 10 ರಾಕೆಟ್ ಉಡಾವಣೆಯು ಹವಾಮಾನ ವೈಪರೀತ್ಯ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಮಾ.19ಕ್ಕೆ ಸುನೀತಾ ಭೂಮಿಗೆ ಮರಳುವ ಸಾಧ್ಯತೆಗಳಿವೆ, ನಾಲ್ವರು ಗಗನಯಾತ್ರಿಗಳು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕೆಲ ದಿನಗಳನ್ನು ಕಳೆಯಲಿದ್ದಾರೆ. ಬಳಿಕ ಕ್ರೂ-9 ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ಇದು ಮಾರ್ಚ್ 19ಕ್ಕೆ ಅಲ್ಲಿಂದ ಹೊರಡುವ ನಿರೀಕ್ಷೆ ಇದೆ.
