ಆಸ್ಪತ್ರೆಯಿಂದ ಅಮಿತಾಬ್ ಡಿಸ್ಚಾರ್ಜ್ : ಅಭಿಮಾನಿಗಳಲ್ಲಿ ಸಂತಸ!!

ಮುಂಬೈ:

       ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲಾಗಿ ನಾಲ್ಕು ದಿನದ ನಂತರ ಡಿಸ್ಚಾರ್ಜ್ ಆಗಿದ್ದಾರೆ.

      ಮಂಗಳವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ರೂಟಿನ್ ಚೆಕಪ್‍ಗಾಗಿ ಆಸ್ಪತ್ರೆಗೆ ದಾಖಲಾಗಿ ನಟ ಅಮಿತಾಬ್ ರನ್ನು ಮುಂಬಯಿಯ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಶುಕ್ರವಾರ, ಅಮಿತಾಬ್ ಬಚ್ಚನ್ ತಮ್ಮ ಪತ್ನಿ ಜಯ ಬಚ್ಚನ್ ಮತ್ತು ಮಗ ಅಭಿಷೇಕ್ ಅವರೊಂದಿಗೆ ರಾತ್ರಿ 10 ಗಂಟೆಗೆ ಮನೆಗೆ ತೆರಳಿದ್ದಾರೆ. 

       77 ವರ್ಷದ ನಟ ಕೆಲವು ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ ನಂತರ ಆಸ್ಪತ್ರೆಯಲ್ಲಿ ವಾಡಿಕೆಯ ತಪಾಸಣೆಗೆ ಹೋಗಿದ್ದರು, ಆದಾಗ್ಯೂ, ಅವರು ಶುಕ್ರವಾರ ತಡವಾಗಿ ಡಿಸ್ಚಾರ್ಜ್ ಆಗುವ ಮೊದಲು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದರು.  ಭಾನುವಾರ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ಶುಕ್ರವಾರವೇ ಅಮಿತಾಬ್ ಡಿಸ್ಚಾರ್ಜ್ ಆದ ಕಾರಣ ಅವರ ಅಭಿಮಾನಿಗಳು ಆತಂಕ ಕಡಿಮೆ ಆಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ