ಬೆಂಗಳೂರು:
ನಟ ಕಿಚ್ಚ ಸುದೀಪ್ ಅವರ ತಾಯಿ ನಿಧನದ ನಂತರ ಸಂತಾಪದ ಸಾಗರವೇ ಹರಿದುಬಂದಿತ್ತು.ಈ ಕುರಿತಂತೆ ನಟ ಸುದೀಪ್, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಂತಾಪಸೂಚಕ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ನಿಮ್ಮ ಸಹಾನುಭೂತಿಯ ಸಂತಾಪದ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು.
ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವನದ ಮೂಲಸೆಲೆಯನ್ನು ನೀಡಿವೆ. ನಿಮ್ಮ ಸಾಂತ್ವನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಆಭಾರಿ” ಎಂದಿದ್ದಾರೆ.ನಟ ಸುದೀಪ್ ಅವರಿಗೆ ಅಕ್ಟೋಬರ್ 23ರಂದು ಪ್ರಧಾನಿ ಕಚೇರಿಯಿಂದ ಸಂತಾಪಸೂಚಕ ಪತ್ರವನ್ನು ಕಳುಹಿಸಲಾಗಿದೆ.
