ಏರ್ ಇಂಡಿಯಾ ವಿಮಾನದಲ್ಲಿ ಬೆಂಕಿ!!!

ದೆಹಲಿ:

       ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ(ಐಜಿಐ) ನಿಂತಿದ್ದ ಏರ್ ಇಂಡಿಯಾ ಬೋಯಿಂಗ್ ವಿಮಾನದಲ್ಲಿ ವಿಮಾನವನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಅದರ ಆಕ್ಸಿಲರಿ ಪವರ್ ಯುನಿಟ್ ನಲ್ಲಿ  ಬೆಂಕಿ ಕಾಣಿಸಿಕೊಂಡಿದೆ.

      ಎಂಜಿನಿಯರ್ ಗಳು ವಿಮಾನದಲ್ಲಿ ದೈನಂದಿನ ಪರೀಕ್ಷೆ(ರೊಟೀನ್ ಚೆಕ್) ನಡೆಸುವ ವೇಳೆ ವಿಮಾನದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ.

      ಏರ್ ಇಂಡಿಯಾ ವಿಮಾನ ಬೋಯಿಂಗ್ ಬಿ777-200ಎಲ್‌ಆರ್ (ವಿಟಿ-ಎಎಲ್‌ಎಫ್) ವಿಮಾನವು ಗುರುವಾರ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಕ್ಕೆ ತೆರಳಬೇಕಿತ್ತು. ಬುಧವಾರ ರಾತ್ರಿ ವಿಮಾನದ ದುರಸ್ತಿ ಕಾರ್ಯ ನಡೆದಿತ್ತು. ಆಗ ವಿಮಾನ ಇನ್ನೂ ನಿಲ್ದಾಣದಲ್ಲಿಯೇ ಇತ್ತು. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ.

      ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ಏರ್ ಇಂಡಿಯಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

       ಈ ಘಟನೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ. 42 ಸೆಕೆಂಡ್‌ಗಳ ವಿಡಿಯೋದಲ್ಲಿ ವಿಮಾನದ ಹಿಂಬದಿಯಲ್ಲಿ ಬೆಂಕಿ ಉರಿಯುತ್ತಿರುವುದು ಮತ್ತು ಅದನ್ನು ಅಗ್ನಿಶಾಮಕ ಸಿಬ್ಬಂದಿ ಆರಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

      

 

Recent Articles

spot_img

Related Stories

Share via
Copy link
Powered by Social Snap