ನವದೆಹಲಿ :
ವಿವಿಧ ಭದ್ರತಾ ಸೇವೆಗಳಿಗಾಗಿ ಏಪ್ರಿಲ್ 1ರಿಂದ ವಿಮಾನಯಾನದ ಟಿಕೆಟ್ಗಳು ದುಬಾರಿಯಾಗಲಿವೆ.
ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ, ಪ್ರಯಾಣಿಕರು ಮತ್ತು ಅವರ ಲಗೇಜ್ಗಳ ತಪಾಸಣೆ ಸೇರಿ ವಿವಿಧ ಭದ್ರತೆ ಸೇವೆ ಒದಗಿಸಲು ವಿಮಾನಯಾನ ಭದ್ರತಾ ಶುಲ್ಕ (ಎಎಸ್ಎಫ್)ವನ್ನು ನಾಗರಿಕ ವಿಮಾನಯಾನ ನಿಯಂತ್ರಕರು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಟಿಕೆಟ್ ದರ ಹೆಚ್ಚಾಗಲಿದೆ ಎನ್ನಲಾಗ್ತಿದೆ.
ದೇಶದೊಳಗೆ ಸಂಚರಿಸುವ ಪ್ರಯಾಣಿಕರಿಗೆ 200 ರೂ., ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ 12 ಅಮೆರಿಕನ್ ಡಾಲರ್ ಭದ್ರತಾ ಶುಲ್ಕ ನಿಗದಿಪಡಿಸಲಾಗಿದೆ. ಈವರೆಗೆ 160 ರೂ. ಮತ್ತು 5.20 ಡಾಲರ್ ಭದ್ರತಾ ಶುಲ್ಕ ಇತ್ತು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ