ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜೈಷೆ ಮೊಹಮದ್ ಉಗ್ರ ಸಂಘಟನೆ ಪುಲ್ವಾಮಾ ಆತ್ಮಾಹುತಿ ದಾಳಿಯ ನಂತರ ಮತ್ತೊಂದು ಆತ್ಮಾಹುತಿ ದಾಳಿ ನಡೆಸಲು ಸಜ್ಜಾಗಿತ್ತು ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ದಾಳಿಯ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.
ದಾಳಿಯಲ್ಲಿ ಪಾಕ್ ಮಿಲಿಟರಿಯಾಗಲಿ, ನಾಗರಿಕರನ್ನಾಗಲಿ ಗುರಿಯಾಗಿಸಲಿಲ್ಲ. ಅಲ್ಲದೇ ದಾಳಿ ನಡೆದ ಸ್ಥಳಗಳು ಅರಣ್ಯ ಪ್ರದೇಶದಲ್ಲಿದ್ದು ಯಾವುದೇ ಜನರಿಗೆ ಹಾನಿಯಾಗಿಲ್ಲ. ಉಗ್ರರೇ ನಮ್ಮ ಟಾರ್ಗೆಟ್ ಆಗಿದ್ದರು. ನಾವು ಸೂಚನೆ ನೀಡಿದರೂ ಜೈಶ್ ಸಂಘಟನೆ ವಿರುದ್ಧ ಪಾಕ್ ಕ್ರಮಕೈಗೊಂಡಿರಲಿಲ್ಲ. ಜೈಶ್ ಸಂಘಟನೆಯ ಮೇಲೆ ದಾಳಿ ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.
ಫೆಬ್ರವರಿ 14ರಂದು ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಗೆ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು. ದಾಳಿ ನಡೆಸಿದ ಜೈಶೆ ಮೊಹಮ್ಮದ್ ಸಂಘಟನೆಯನ್ನು ಪಾಕಿಸ್ತಾನ ಪೋಷಿಸುತ್ತಿದೆ. ಆದರೆ ಈ ಬಗ್ಗೆ ಪಾಕ್ ತಳ್ಳಿಹಾಕುತ್ತಿದೆ. ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ