ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ವಲಯದಲ್ಲಿ ಭದ್ರತಾಪಡೆ ಶುಕ್ರವಾರ ನಡೆಸಿದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದೆ.
ಪುಲ್ವಾಮಾದ ಪಂಜ್ರಾನ್ ಲಾಸಿಪೋರಾ ಪ್ರದೇಶದಲ್ಲಿ ಸೇನಾ ಪಡೆಗಳು ಗುರುವಾರ ಸಂಜೆಯಿಂದ ಭಾರೀ ಕಾರ್ಯಾಚರಣೆ ಆರಂಭಿಸಿ, ಉಗ್ರರನ್ನು ಸಂಜೆ ಸುತ್ತುವರಿದಿದ್ದ ಸೇನಾ ಪಡೆಗಳು ರಾತ್ರಿಯಿಡೀ ಗುಂಡಿನ ಚಕಮಕಿ ನಡೆಸಿದ್ದಾರೆ. ಗುಂಡಿನ ಕಾಳಗ ನಾಲ್ವರು ಉಗ್ರರ ಹತ್ಯೆಯಲ್ಲಿ ಅಂತ್ಯವಾಗಿದೆ. ಸ್ಥಳದಲ್ಲಿ ಇನ್ನೂ ಕೆಲ ಉಗ್ರರಿರುವ ಸಾಧ್ಯತೆಹಿನ್ನಲೆ ಹುಡುಕಾಟ ಮುಂದುವರಿದಿದೆ.
ಮೃತ ಉಗ್ರರನ್ನು ಆಶಿಖ್ ಅಹ್ಮದ್, ಇಮ್ರಾನ್ ಅಹ್ಮದ್, ಶಬಿರ್ ಅಹ್ಮದ್ ಮತ್ತು ಸಲ್ಮಾನ್ ಖಾನ್ ಎಂದು ಗುರುತಿಸಲಾಗಿದೆ. ಹತರಾದ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಾಲ್ವರು ಉಗ್ರರೂ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರೆಂಬುದು ತಿಳಿದುಬಂದಿದೆ. ನಾಲ್ವರನ್ನು ಇಬ್ಬರು ವಿಶೇಷ ಪೊಲೀಸ್ ಆಫೀಸರ್ ಆಗಿದ್ದವರು, ನಂತರ ಉಗ್ರ ಸಂಘಟನೆಯನ್ನು ಸೇರಿದ್ದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ