ಪಣಜಿ:
ಸೋಮವಾರ ಮಧ್ಯ ರಾತ್ರಿ 2 ಗಂಟೆಯಲ್ಲಿ ಗೋವಾದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿಯ ಪ್ರಮೋದ್ ಸಾವಂತ್ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಮಾಡಿದ ನೂತನ ಸಿಎಂ, 20 ಮತಗಳನ್ನು ಗಳಿಸಿಕೊಳ್ಳುವ ಮೂಲಕ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಗೋವಾ ವಿಧಾನಸಭೆ 40 ಶಾಸಕರನ್ನು ಹೊಂದಿದೆ. ಈ ಪೈಕಿ ಸಂಖ್ಯೆ 36ಕ್ಕೆ ಇಳಿದಿದ್ದು, 19 ಶಾಸಕರನ್ನು ಹೊಂದಿರುವ ದೊಡ್ಡಪಕ್ಷ ಅಥವಾ ಯಾವುದೇ ಪಕ್ಷಗಳು ಸೇರಿ ಮೈತ್ರಿ ಸರ್ಕಾರ ರಚಿಸಬಹುದಾಗಿದೆ. ಬಿಜೆಪಿ-12, ಮಹಾರಾಷ್ಟ್ರ ಗೋಮಂತಕ ಪಕ್ಷ-3, ಗೋವಾ ಪಾರ್ವರ್ಡ್ ಪಕ್ಷ-3, ನಿರ್ದಲಿಯ-3, ಕಾಂಗ್ರೆಸ್-14 ಮತ್ತು ಎನ್‍ಎಸ್‍ಪಿ-1 ಒಳಗೊಂಡಂತೆ 36 ಶಾಸಕರನ್ನು ಗೋವಾ ವಿಧಾನಸಭೆ ಹೊಂದಿದೆ. ಎಂಜಿಪಿ, ಜಿಎಫ್ಪಿಯಿಂದ ತಲಾ ಮೂವರು ಹಾಗೂ ಮೂವರು ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿದೆ.
ಕ್ಯಾನ್ಸರ್ನಿಂದ ಬಳಲುತ್ತಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ನಿಧನವಾದ ಬಳಿಕ ಪ್ರಮೋದ್ ಸಾವಂತ್ 11 ಸಚಿವರ ಸಮ್ಮುಖದಲ್ಲಿಯೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ