ನವದೆಹಲಿ:
ರೈಲ್ವೆ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿಯೊಂದು ನೀಡಿದ್ದು, ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ರಿಸರ್ವೇಶನ್ ಸೀಟುಗಳನ್ನು ಹುಟುಕುವುದು ಇನ್ಮುಂದೆ ಸುಲಭವಾಗಲಿದೆ.
ಹೌದು, ಇಷ್ಟು ದಿನ ನೀವು ರೈಲಿನಲ್ಲಿ ಪ್ರಯಾಣಿಸುವಾಗ ರಿಸರ್ವೇಶನ್ ಸೀಟುಗಳು ಲಭ್ಯ ಇವೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇರುತ್ತಿರಲಿಲ್ಲ. ಆದರೆ ಇನ್ನು ಹಾಗಾಗಲ್ಲ. ನೀವು ಟಿಟಿಗಳ ಹಿಂದೆ ಹೋಗಬೇಕಾಗಿಯೂ ಇಲ್ಲ. ರಿಸರ್ವೇಷನ್ ಚಾರ್ಟನ್ನು ಐ.ಆರ್.ಸಿ.ಟಿ.ಸಿ. ವೆಬ್‌ಸೈಟ್ ನಲ್ಲಿ ಕಾಣಬಹುದಾಗಿದೆ.
ರೈಲ್ವೇ ಸೇವೆಯಲ್ಲಿ ಪಾರದರ್ಶಕತೆ ಹಾಗೂ ಭ್ರಷ್ಟಾಚಾರವನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ನೂತನ ಪದ್ಧತಿಯನ್ನು ಜಾರಿಗೆ ತರುತ್ತಿದೆ. ಇಲ್ಲಿ ನೀವು ಮಾಡಬೇಕಾದ್ದು ಇಷ್ಟೇ.
ರಿಸರ್ವೇಶನ್ ಸೀಟುಗಳ ಬಗ್ಗೆ ತಿಳಿದುಕೊಳ್ಳಲು ಪ್ರಯಾಣಿಕರು, ಐ.ಆರ್.ಸಿ.ಟಿ.ಸಿ. ವೆಬ್ ಸೈಟ್ ಗೆ ಭೇಟಿ ನೀಡಿ, ಈ ಪುಟದ ಕೆಳ ಭಾಗದಲ್ಲಿ ಚಾರ್ಟ್ಸ್/ ವೇಕೆನ್ಸಿ ಎಂಬ ಆಪ್ಷನ್ ಇರುತ್ತದೆ. ಇದನ್ನು ಕ್ಲಿಕ್ ಮಾಡಿದರೆ ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಟ್ರೈನಿನ ಸಂಖ್ಯೆ, ಹೊರಡುವ ದಿನಾಂಕ ಹಾಗೂ ಎಲ್ಲಿಂದ ಹೊರಡುತ್ತಿದ್ದಾರೆ ಎಂಬ ಮಾಹಿತಿಯನ್ನು ತುಂಬಬೇಕು. ಅದಾದ ಬಳಿಕ ನಿಮಗೆ ರಿಸರ್ವೇಷನ್ ಚಾರ್ಟ್ ಕಾಣುತ್ತದೆ. ಅಲ್ಲಿ ನೀವು ನಿಮ್ಮ ಕೋಚ್ ನಂಬರ್ ಮೇಲೆ ಕ್ಲಿಕ್ ಮಾಡಿದರೆ ಚಾರ್ಟನ್ನು ಕಾಣಬಹುದಾಗಿದೆ. ಬಳಿಕ ನೀವು ನಿಖರ ಬರ್ತ್ ಅನ್ನು ಕ್ಲಿಕ್ ಮಾಡಿದಾಗ ನಿಮಗೆ ಅಲ್ಲಿ ಆ ವ್ಯಕ್ತಿ ಇದ್ದಾರೆ ಅಥವಾ ಇಲ್ಲವೇ ಎಂಬುದನ್ನು ತೋರಿಸುತ್ತದೆ. ಆಗ ನಿಮಗೆ ಆಯ್ಕೆ ಸುಲಭವಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ