ಕೇಂದ್ರ ಸರ್ಕಾರದಿಂದ ಯೋಧರಿಗೆ ಭರ್ಜರಿ ಸಿಹಿಸುದ್ದಿ!!

ದೆಹಲಿ :

      ದೇಶ ಕಾಯುವ ಯೋಧರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ.

      ಕರ್ತವ್ಯದ ಸಂದರ್ಭದಲ್ಲಿ ಗಾಯಗೊಂಡ ಯೋಧರಿಗೆ ಸರ್ಕಾರಿ ವಸತಿ ಕಟ್ಟಡಗಳಲ್ಲಿ ಉಳಿದುಕೊಳ್ಳಲು ಇದ್ದ ಕಾಲಮಿತಿಯನ್ನು ಈಗ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

     ಈ ಮೊದಲು ಕರ್ತವ್ಯದ ವೇಳೆ ಯೋಧರು ತೀವ್ರ ಸ್ವರೂಪವಾಗಿ ಗಾಯಗೊಂಡ ಸಂದರ್ಭದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ 3 ತಿಂಗಳುಗಳ ಕಾಲ ಸರ್ಕಾರಿ ವಸತಿ ಕಟ್ಟಡದಲ್ಲಿ ವಾಸ್ತವ್ಯ ಹೂಡಬಹುದಾಗಿತ್ತು. ಇದೀಗ ಈ ಕಾಲಮಿತಿಯನ್ನು 1 ವರ್ಷಗಳವರೆಗೆ ವಿಸ್ತರಿಸಲಾಗಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಈ ಪ್ರಸ್ತಾವನೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link