ಸಿಹಿಸುದ್ಧಿ : ಜಿ.ಎಸ್.ಟಿ. ರಿಟರ್ನ್ ಗಡುವು ವಿಸ್ತರಣೆ!!

ದೆಹಲಿ:

      ಜಿ.ಎಸ್‌.ಟಿ. ರಿಟರ್ನ್ಸ್ ಫೈಲಿಂಗ್ ಗಡುವು ವಿಸ್ತರಿಸುವ ಮೂಲಕ  ಜಿ.ಎಸ್‌.ಟಿ. ರಿಟರ್ನ್ಸ್ ಫೈಲಿಂಗ್ ಮಾಡುವವರಿಗೊಂದು ಖುಷಿ ಸುದ್ದಿ ನೀಡಿದೆ.

      ಸಿಬಿಐಸಿ ಟ್ವೀಟರ್ ನಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಜಿ.ಎಸ್‌.ಟಿ. ರಿಟರ್ನ್ ಫೈಲ್ ಮಾಡುವ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಹೇಳಿದೆ.

      ಸಿಬಿಐಸಿ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಜಿ.ಎಸ್‌.ಟಿ.ಆರ್ – 9, ಜಿ.ಎಸ್‌.ಟಿ.ಆರ್ – 9ಎ ಮತ್ತು ಜಿ.ಎಸ್‌.ಟಿ.ಆರ್ – 9ಸಿ ಅರ್ಜಿಯನ್ನು ಭರ್ತಿ ಮಾಡಲು ತೆರಿಗೆದಾರರಿಗೆ ನವೆಂಬರ್ 30, 2019 ರವರೆಗೆ ಸಮಯವಿದೆ. 

      2017-2018ರ ಜಿ.ಎಸ್‌.ಟಿ. ರಿಟರ್ನ್ ಫೈಲ್ ಮಾಡಲು ಆಗಸ್ಟ್ 31 ಕೊನೆ ದಿನಾಂಕವಾಗಿತ್ತು. ಎಲ್ಲಾ ವ್ಯಾಪಾರಿಗಳು ಸರಕು ಮತ್ತು ಸೇವಾ ತೆರಿಗೆಯನ್ನು ಜಿ. ಎಸ್‌. ಟಿ. ಆರ್ – 9 ಫಾರ್ಮ್ ಮೂಲಕ ಭರ್ತಿ ಮಾಡಬೇಕು. ಖರೀದಿ ಮತ್ತು ಮಾರಾಟದ ಬಗ್ಗೆ ವ್ಯಾಪಾರಿಗಳು ಇದ್ರಲ್ಲಿ ಮಾಹಿತಿ ನೀಡಬೇಕಾಗುತ್ತದೆ.

      ಕೆಲವರಿಗೆ ಜಿ.ಎಸ್‌.ಟಿ. ರಿಟರ್ನ್ ಅರ್ಜಿ ಭರ್ತಿ ಮಾಡಲು ಸಮಸ್ಯೆಯಾಗ್ತಿದೆ. ಗಡುವು ವಿಸ್ತರಣೆಯಾದ ಕಾರಣ ಉದ್ಯಮಿಗಳಿಗೆ ಹೆಚ್ಚಿನ ಸಮಯ ಸಿಗಲಿದೆ. ಸಿಬಿಐಸಿ ನಾಲ್ಕನೇ ಬಾರಿ ಗಡುವು ವಿಸ್ತರಿಸುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap