ಕಾಂಡ್ಲಾ ಬಂದರಿನಲ್ಲಿ ಭಾರಿ ಸ್ಪೋಟ : ಮೂವರ ಸಾವು!!!

ಗಾಂಧಿನಗರ :

     ಗುಜರಾತಿನ ಕಾಂಡ್ಲಾ ಬಂದರಿನಲ್ಲಿರುವ ಇಂಡಿಯನ್ ಆಯಿಲ್ ಶುದ್ಧೀಕರಣ ಘಟಕದ ಬಳಿ ಭಾರಿ ಸ್ಪೋಟ ಸಂಭವಿಸಿ, ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

      ಕಾಂಡ್ಲಾ ಬಂದರಿನ ರಾಸಾಯನಿಕ ಟ್ಯಾಂಕರ್ ಗಳ ಬಳಿ ಹಾಗೂ ಇಂಡಿಯನ್ ಆಯಿಲ್ ಶುದ್ದೀಕರಣ ಘಟಕದ ಬಳಿ ಭಾರಿ ಪ್ರಮಾಣದಲ್ಲಿ ಸ್ಪೋಟ ಸಂಭವಿಸಿದೆ. ಸ್ಪೋಟದಿಂದಾಗಿ ಹೊಗೆ ಆಗಸದವರೆಗೆ ವ್ಯಾಪಿಸಿದ್ದು, ದುರ್ಘಟನೆಯಲ್ಲಿ ಮೂವರು ಬಲಿಯಾಗಿದ್ದಾರೆ. 

      ಇನ್ನು ಹಲವು ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧಾವಿಸಿರುವ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಪೋಟಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ