ಗುಂಡುಗಲ್‍ನ ಸರ್ಕಾರಿ ಪ್ರೌಢಶಾಲೆಯು ಸಮಸ್ಯೆಗಳ ಆಗರ

0
18

ಗುಂಡುಗಲ್ :

   ಗುಂಡುಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಸದರಿ ಶಾಲೆಯ ಕಾಂಪೌಂಡ್ ಶಿಥಿಲವಾಗಿರುತ್ತದೆ. ಈ ಗ್ರಾಮವು ಆಂಧ್ರದ ಗಡಿ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಗೆ ಸೇರಿದ ಕಲಿದೇವಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಈ ಪ್ರೌಢಶಾಲೆಯಲ್ಲಿ ಕೇವಲ ಮೂರು ಕೊಠಡಿಗಳಿದ್ದು, ಒಂದು ಕೊಠಡಿ ಮುಖ್ಯ ಶಿಕ್ಷಕರ ಹಾಗೂ ಅಕ್ಷರ ದಾಸೋಹದ ದಾಸ್ತಾನು ಕೊಠಡಿಯೂ ಆಗಿರುತ್ತದೆ.

   ಸದರಿ ಶಾಲೆಯಲ್ಲಿ ನಾಲ್ಕಾರು ಕಂಪ್ಯೂಟರ್ ಯಂತ್ರಗಳಿದ್ದು ಎಲ್ಲವೂ ಕೆಟ್ಟು ನಿಂತಿರುತ್ತವೆ. ಇನ್ನು ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳು ಮರೀಚಿಕೆಯಾಗಿರುತ್ತವೆ. ಮತ್ತೆರೆಡು ಕೊಠಡಿಗಳು ಅತ್ಯಾವಶ್ಯಕತೆಯಿರುತ್ತದೆ. ಸದರಿ ಶಾಲೆಯ ಆವರಣದಲ್ಲಿ ಪ್ರತಿನಿತ್ಯ ಮದ್ಯಪಾನಿಗಳು ಕುಡಿದ ಬಾಟಲ್‍ಗಳು, ಕುಡಿತದ ಪ್ಯಾಕೆಟ್‍ಗಳು, ಬೀಡಿ, ಸೀಗರೇಟ್ ಸೇದಿ ಬಿಸಾಕಿರುವ ತುಂಡುಗಳು ಬಿದ್ದಿರುತ್ತವೆ.

 

ಶಾಲೆಗೆ ಬಂದಂತಹ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲೆಗೆ ಬಂದಾಗ ಮೊದಲ ಕೆಲಸ ಇವುಗಳನ್ನು ಸ್ವಚ್ಛಗೊಳಿಸುವುದಾಗಿರುತ್ತದೆ. ಆದ್ದರಿಂದ ಸಂಬಂಧಿಸಿದ ಜನ ಪ್ರತಿನಿಧಿಗಳು ಹಾಗೂ ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಶಾಲೆಯ ಸಮಸ್ಯೆಗಳಿಗೆ ಕೂಡಲೆ ಸ್ಪಂದಿಸಬೇಕಾಗಿದೆ.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here