ಮುಂಬೈ:
ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ 20 ಲಕ್ಷ ರೂ. ದಂಡ ವಿಧಿಸಿದೆ.
ಜನಪ್ರಿಯ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ವಿರುದ್ಧ ಬಿಸಿಸಿಐ ಡಿ.ಕೆ. ಜೈನ್ ನೇತೃತ್ವದ ಓಂಬುಡ್ಸ್ಮನ್ ಸಮಿತಿಯನ್ನುತನಿಖೆ ಮಾಡುವಂತೆ ನೇಮಿಸಿತ್ತು. ಈ ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ ಒಂಬುಡ್ಸ್ಮನ್ ಸಮಿತಿ 20 ಲಕ್ಷ ರೂ. ದಂಡ ವಿಧಿಸಿದೆ.
ಈ ಇಬ್ಬರಿಗೆ 20 ಲಕ್ಷದಲ್ಲಿ 10 ಲಕ್ಷವನ್ನ ಪ್ಯಾರಾ ಮಿಲಿಟರಿ ಫೋರ್ಸ್ನ, 10 ಮೃತ ಸೈನಿಕರ ಪತ್ನಿಯರಿಗೆ ತಲಾ 1 ಲಕ್ಷ ಹಾಗೂ ಅಂಧರ ಕ್ರಿಕೆಟ್ ಸಂಸ್ಥೆಗೆ 10 ಲಕ್ಷ ರೂ. ಠೇವಣಿ ಇರಿಸುವಂತೆ ಸೂಚಿಸಿದ್ದಾರೆ.
ಪಾಂಡ್ಯ ಮತ್ತು ರಾಹುಲ್‌ಗೆ ಈಗಾಗಲೇ ಒಮ್ಮೆ ಅಮಾನತು ಮತ್ತು ಇಬ್ಬರೂ ಬೇಷರತ್ ಕ್ಷಮೆ ಯಾಚಿಸಿದ್ದಾರೆ. ಹೀಗಾಗಿ ಮತ್ತೆ ಅವರಿಗೆ ಹೆಚ್ಚುವರಿ ಶಿಕ್ಷೆಯಿರುವುದಿಲ್ಲ.
ದಂಡ ವಿಧಿಸಿರುವುದರ ಕುರಿತು ಬಿಸಿಸಿಐ ಅಧಿಕೃತ ಹೇಳಿಕೆ ನೀಡಿದ್ದು, ದಂಡ ವಿಧಿಸಿರುವುದು ಬಿಟ್ಟರೆ ಇನ್ನು ಬೇರಾವುದೇ ಕ್ರಮ ಇರುವುದಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ