ವಾಜಪೇಯಿ ನಿವಾಸವೀಗ ಅಮಿತ್ ಷಾ ವಿಳಾಸ!!

ನವದೆಹಲಿ:

Related image

      ಕೇಂದ್ರ ಗೃಹ ಸಚಿವರಾಗಿ ನೂತನವಾಗಿ ಅಧಿಕಾರ ಸ್ವೀಕರಿಸಿರುವ ಅಮಿತ್ ಶಾ ಅವರಿಗೆ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ‘6 A ಕೃಷ್ಣಮೆನನ್ ಮಾರ್ಗ್’ ನಿವಾಸವನ್ನು ಹೊಸ ವಿಳಾಸವಾಗಿ ಪಡೆದುಕೊಂಡಿದ್ದಾರೆ. 

      2004ರ ಲೋಕಸಭೆ ಚುನಾವಣೆಯಲ್ಲಿ ಸೋಲಾದ ಬಳಿಕ ಅಟಲ್​ ಬಿಹಾರಿ ವಾಜಪೇಯಿ ಅವರು ತಮ್ಮ ಕೊನೆಯುಸಿರಿರುವವರೆಗೂ ಕೃಷ್ಣ ಮೆನನ್​ ರಸ್ತೆಯಲ್ಲಿರುವ 3 ಎಕರೆ ವಿಸ್ತೀರ್ಣದಲ್ಲಿದ್ದ ಈ ಮನೆಯಲ್ಲೇ ವಾಸವಾಗಿದ್ದರು. ಈ ಮನೆಯಲ್ಲಿ 7 ಮಲಗುವ ಕೊಠಡಿಗಳಿದ್ದು 2 ಡ್ರಾಯಿಂಗ್​ ರೂಂಗಳಿವೆ. ಗೃಹ ಸಚಿವರಾಗಿರುವ ಅಮಿತ್​ ಷಾ ಅವರಿಗೆ ಹೆಚ್ಚಿನ ಭದ್ರತೆಯ ಅಗತ್ಯ ಇರುವುದರಿಂದ, ವಾಜಪೇಯಿ ಅವರಿದ್ದ ಮನೆಗೆ ಸ್ಥಳಾಂತರಿಸಲು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ನಿರ್ಧರಿಸಿದೆ.

      ಗೃಹ ಸಚಿವ ಅಮಿತ್ ಶಾ ಅವರ ಅಗತ್ಯತೆಗಳ ಪ್ರಕಾರ ಮುಂದಿನ ತಿಂಗಳಲ್ಲಿ ಈ ಬಂಗಲೆಯನ್ನು ಸಿದ್ದಪಡಿಸಲಾಗುವುದು ಎಂದು  ಅಧಿಕಾರಿಗಳು ಗುರುವಾರ ದೃಢಪಡಿಸಿದ್ದಾರೆ. ಹದಿನೇಳನೇ ಲೋಕಸಭೆ ರಚನೆಯ ನಂತರ, ಈ ಬಂಗಲೆವನ್ನು ಕೇಂದ್ರ ಸಚಿವರಾಗಿ ‘ಶಾ’ ಅವರಿಗೆ ನಿಗದಿಪಡಿಸಲಾಗಿದೆ. ಕೇಂದ್ರ ಮಂತ್ರಿಗಳಿಗೆ ನಿಗದಿಪಡಿಸಲಾದ ‘ಟೈಟ್ 8’ ವಿಭಾಗದಲ್ಲಿ ದುರಸ್ತಿ ಕೆಲಸ ನಡೆಯುತ್ತಿದೆ.

      ಈ ಮೊದಲು ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ, ಪ್ರಸ್ತುತ ಅಕ್ಬರ್ ರಸ್ತೆಯ ನಂ 11 ಬಂಗಲೆಯಲ್ಲಿ ವಾಸವಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಅಮಿತ್ ಶಾ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಮೋದಿ ಸರ್ಕಾರ-2ರಲ್ಲಿ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಅವಿಗೆ ಹೊಸ ಬಂಗಲೆಯನ್ನು ನೀಡಲಾಗುತ್ತಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap