‘ಪ್ರಧಾನಿ ಮೋದಿ ಪ್ರಭಾವದಿಂದ ಬಿಜೆಪಿ ಸೇರಿದೆ’ – ಗಂಭೀರ್

ದೆಹಲಿ:

      ದೇಶದ ಬಗ್ಗೆ ಪ್ರಧಾನಿ ಮೋದಿ ಹೊಂದಿರುವ ದೂರದೃಷ್ಟಿಯಿಂದ ಪ್ರೇರಣೆ ಪಡೆದುಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು 37 ವರ್ಷದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಿಳಿಸಿದ್ದಾರೆ.

      ಬಿಜೆಪಿ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಗಂಭೀರ್, ‘ನರೇಂದ್ರ ಮೋದಿ ಅವರ ದೃಷ್ಟಿಕೋನದ ಪ್ರಭಾವಕ್ಕೆ ಒಳಗಾಗಿದ್ದೇನೆ. ಕ್ರಿಕೆಟ್ ಕ್ಷೇತ್ರಕ್ಕೆ ಒಂದಷ್ಟು ಕೊಡುಗೆ ನೀಡಿದ್ದೇನೆ. ಈಗ ದೇಶಕ್ಕಾಗಿ ಮತ್ತಷ್ಟು ಕೆಲಸ ಮಾಡುವ ಭರವಸೆ ಹೊಂದಿದ್ದೇನೆ’ ಎಂದು ತಿಳಿಸಿದರು.

     ಲೋಕಸಭಾ ಚುನಾವಣೆಯಲ್ಲಿ ತವರೂರು ದೆಹಲಿಯಿಂದಲೇ ಗಂಭೀರ್ ಸ್ಪರ್ಧಿಸುವ ಸಾಧ್ಯತೆಯಿದೆ. ಈ ಬಗ್ಗೆ ಪಕ್ಷದಿಂದ ಇನ್ನಷ್ಟೇ ಅಧಿಕೃತ ಸ್ಪಷ್ಟನೆ ಬರಬೇಕಿದೆ. 

     ಕ್ರಿಕೆಟ್ ಅಂಗಣದಲ್ಲಿ ತಮ್ಮ ಆಕ್ರಮಣಕಾರಿ ಶೈಲಿಯ ಮೂಲಕವೇ ಅಭಿಮಾನಿಗಳ ಹೃದಯ ಗೆದ್ದಿರುವ ಗಂಭೀರ್‌ಗೆ ಇದೀಗ ರಾಜಕೀಯ ಚದುರಂಗದಾಟದಲ್ಲೂ ವಿಜಯಶಾಲಿಯಾಗಲು ಸಾಧ್ಯವೇ ಎಂಬುದು ಬಹಳಷ್ಟು ಕುತೂಹಲವೆನಿಸಿದೆ. 

 

Recent Articles

spot_img

Related Stories

Share via
Copy link