ಧರ್ಮಶಾಲಾ:
ಭವಿಷ್ಯದಲ್ಲಿ ಭಾರತೀಯ ಬೌದ್ಧಗುರುವೋರ್ವರು ಧರ್ಮಶಾಲಾದ ಜವಾಬ್ದಾರಿ ಹೊರಬಹುದು. ಇದು ತಮ್ಮ ಆಶಯ ಕೂಡ ಎಂದು ಟಿಬೆಟ್‌ನ ರಾಜಧಾನಿ ಲಾಸಾದಿಂದ ಭಾರತಕ್ಕೆ ಶರಣಾರ್ಥಿಯಾಗಿ ಬಂದ 60ನೇ ವರ್ಷಾಚರಣೆ ವೇಳೆ ದಲೈ ಲಾಮಾ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಲೈಲಾಮಾ, ಬೌದ್ಧರ ಮುಂದಿನ ಧರ್ಮಗುರು ಅಂದರೆ ದಲೈಲಾಮಾ ಭಾರತದಿಂದಲೇ ಆಯ್ಕೆಯಾಗಬಹುದು. ನನ್ನ ಸಾವಿನ ಬಳಿಕ ನಾನು ಭಾರತದಲ್ಲೇ ಮರುಹುಟ್ಟು ಪಡೆಯುತ್ತೇನೆ. ಒಂದು ವೇಳೆ ನನ್ನ ಸಾವಿನ ಬಳಿಕ ಚೀನಾ ಹೊಸ ಧರ್ಮಗುರು ನೇಮಕ ಮಾಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಚೀನಾ ದೇಶ ದಲೈಲಾಮಾರ ಪುನರ್ಜನ್ಮದ ಬಗ್ಗೆ ಈಗಲೇ ಆಲೋಚನೆ ಮಾಡುತ್ತಿದೆ. ಅವರಿಗೆ ನನಗಿಂತ ನನ್ನ ಮುಂದಿನ ದಲೈಲಾಮಾರ ಬಗ್ಗೆ ಜಾಸ್ತಿ ಕಳವಳ ಇದೆ. ಮುಂದಿನ ದಿನಗಳಲ್ಲಿ ಇಬ್ಬರು ದಲೈಲಾಮಾರು ಬಂದರೂ ಅಚ್ಚರಿ ಪಡಬೇಕಿಲ್ಲ. ಒಬ್ಬರು ಟಿಬೇಟ್ ಸಂಪ್ರದಾಯದ ಆಯ್ಕೆ, ಮತ್ತೊಬ್ಬರನ್ನು ಚೀನಾ ಆಯ್ಕೆ ಮಾಡಬಹುದು. ಆದರೆ ಚೀನಾ ಆಯ್ಕೆ ಮಾಡಿದ ದಲೈಲಾಮಾರಿಗೆ ಯಾರೂ ಗೌರವ ಕೊಡುವುದಿಲ್ಲ ಎಂದರು.
ದಲೈ ಲಾಮಾ ಅವರ ಹೇಳಿಕೆಯಿಂದ ಚೀನಾಗೆ ಮುಜುಗರವಾಗಿದ್ದು, ತನ್ನ ಭವಿಷಸ್ಯದ ಯೋಜನೆಗೆ ಈಗಲೇ ಅಡ್ಡಗಾಲು ಹಾಕಿದ ಧರ್ಮಗುರು ಬಗ್ಗೆ ಅಸಮಾಧಾನ ಹೊರಹಾಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
