ಅನೈತಿಕ ಸಂಬಂಧ ಅಪರಾಧವಲ್ಲ : ಸುಪ್ರೀಂ ತೀರ್ಪು..!

ದೆಹಲಿ:

     ‘ಅನೈತಿಕ ಸಂಬಂಧ ಅಪರಾಧವಾಗುವುದಕ್ಕೆ ಸಾಧ್ಯವಿಲ್ಲ. ಆದರೆ ಅದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದರೆ ಮಾತ್ರ ಅಪರಾಧವಾಗುತ್ತದೆ’ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

            “ಸಮಾನತೆ ಎಂಬುದು ವ್ಯವಸ್ಥೆಯನ್ನು ಆಳುತ್ತಿರುವ ತತ್ತ್ವ. ಮಹಿಳೆ ಮತ್ತು ಪುರುಷರನ್ನು ಸಮಾನವಾಗಿ ಗೌರವಿಸಬೇಕು. ಗಂಡ ಹೆಂಡತಿಗೆ ಮಾಲೀಕನಲ್ಲ. ಮಹಿಳೆ, ಪುರುಷ ಇಬ್ಬರೂ ಸಮಾನರು.ಅಂತೆಯೇ ವ್ಯಭಿಚಾರವನ್ನು ಅಪರಾಧವೆಂದು ಪರಿಗಣಿಸುವುದಕ್ಕಾಗುವುದಿಲ್ಲ. ಅದು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದರೆ ಮಾತ್ರವೇ ಅಪರಾಧ” ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.

      ಚೀನಾ, ಜಪಾನ್‌, ಬ್ರೆಜಿಲ್‌ನಲ್ಲಿ ಇದೊಂದು ಅಪರಾಧವಲ್ಲ ಹಾಗೂ ಅನೇಕ ರಾಷ್ಟ್ರಗಳು ಇದನ್ನು ಅಪರಾಧಮುಕ್ತಗೊಳಿಸಿವೆ. ವಿವಾಹ ಬಾಹಿರ ಸಂಬಂಧ ಅತ್ಯಂತ ಖಾಸಗಿ ವಿಚಾರವಾಗಿದ್ದು, ಇದನ್ನು ಅಪರಾಧವಾಗಿ ಪರಿಗಣಿಸುವುದರಿಂದ ಖಾಸಗಿ ವಿಚಾರಕ್ಕೆ ಅಡ್ಡಿ ಉಂಟುಮಾಡಿದಂತೆ ಆಗುತ್ತದೆ. ಮಹಿಳೆಯನ್ನು ಅಸಮಾನತೆಯಿಂದ ಕಾಣುವ ಯಾವುದೂ ಸಾಂವಿಧಾನಿಕವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಭಿಪ್ರಾಯ ಪಟ್ಟರು. 

      ವ್ಯಭಿಚಾರಕ್ಕೆ ಶಿಕ್ಷೆ ವಿಧಿಸುವ ಐಪಿಸಿ(ಭಾರತೀಯ ದಂಡ ಸಂಹಿತೆ)ಯ ಸೆಕ್ಷನ್ 497 ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಇಂದು(ಸೆ.27) ಈ ಐತಿಹಾಸಿಕ ತೀರ್ಪು ನೀಡಿದೆ.

 

             ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link