ಬೆ.ಕೇಂದ್ರದ ಟಿಕೆಟ್ ಗಾಗಿ ಬಿ ಕೆ ಹರಿಪ್ರಸಾದ್ ಲಾಬಿ…!!!!

ಬೆಂಗಳೂರು;

       ಲೋಕಸಭಾ ಚುನಾವಣೆ ಕಾವು ತೀವ್ರಗೊಳ್ಳುತ್ತಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣೆಗೆ ಹಿರಿಯ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಅಭ್ಯರ್ಥಿಯಾಗಲು ಲಾಬಿ ನಡೆಸುತ್ತಿದ್ದಾರೆ.

       ಪಕ್ಷ ಸಂಘಟನೆ ,ಕಾಂಗ್ರೆಸ್ ಪಕ್ಷದ ಬಗ್ಗೆ ನಿಷ್ಠೆ ಮತ್ತು ಎ.ಐ.ಸಿ.ಸಿ.ಮಟ್ಟದಲ್ಲಿ ಉತ್ತಮ ಒಡನಾಟವಿರುವ ಹರಿಪ್ರಸಾದ್ ಮೈತ್ರಿಕೂಟದ ಅಭ್ಯರ್ಥಿಯಾಗಲು ಪ್ರಯತ್ನ ನಡೆಸುತ್ತಿದ್ದಾರೆ.

      8 ವಿಧಾನಸಭಾ ಕ್ಷೇತ್ರದಲ್ಲಿ ಬಿ.ಕೆ.ಹರಿಪ್ರಸಾದ್ ರವರ ಬೆಂಬಲಿಗರ ಸಂಖ್ಯೆ ಹೆಚ್ಚಿದ್ದು, ಈ ಬಾರಿ ಮೈತ್ರಿಕೂಟಕ್ಕೆ ಈ ಕ್ಷೇತ್ರದಲ್ಲಿ ಉತ್ತಮ ಅವಕಾಶವಿದೆ. ಕಾಂಗ್ರೆಸ್ ,ಜೆಡಿಎಸ್ ಮೈತ್ರಿ ಬಹಳ ಅನುಕೂಲವಾಗಲಿದೆ .ಇತರೆ ಪಕ್ಷಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೊಡುವುದರಿಂದ ಕೇಂದ್ರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ.

      ಕಳೆದ ಐದು ವರ್ಷಗಳಲ್ಲಿ ಕೇಂದ್ರದ ಬಿ.ಜೆ.ಪಿ ಆಡಳಿತ ಗಮನಾರ್ಹ ಸುಧಾರಣೆ ತರುವಲ್ಲಿ ವಿಫಲವಾಗಿದೆ. ಜತೆಗೆ ಬಿಜೆಪಿ ಧೋರಣೆ, ಪ್ರಧಾನಿ ನರೇಂದ್ರ ಮೋದಿ ಆಡಳಿತ ಜನರಿಗೆ ಬೇಸರ ತರಿಸಿದೆ.

      ನೋಟು ಅಮಾನ್ಯೀಕರಣ ,ಅವೈಜ್ಞಾನಿಕ ಜಿ.ಎಸ್.ಟಿ, 2ಕೋಟಿ ಉದ್ಯೋಗ ಸುಳ್ಳು ಭರವಸೆ ನೀಡಿದ ಬಿ.ಜೆ.ಪಿ ವಿರುದ್ದ ಜನಾಭಿಪ್ರಾಯ ಇರುವುದರ ಬಗ್ಗೆ ಹರಿಪ್ರಸಾದ್ ಈಗಾಗಲೇ ಪ್ರಾಥಮಿಕ ಸಮೀಕ್ಷೆ ನಡೆಸಿದ್ದಾರೆ.ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿರುವ ಬಿ.ಕೆ.ಹರಿಪ್ರಸಾದ್ ಅರಮನೆ ಮೈದಾನದ ವೈಟ್ ಪೆಟಲ್ ನಲ್ಲಿ ಸ್ಮೇಹ ಸೌಹರ್ದ ಭೋಜನ ಕೂಟ ಆಯೋಜಿಸಿದ್ದರು .

         ಕಾರ್ಯಕ್ರಮದಲ್ಲಿ ಸಚಿವರಾದ ಡಿ.ಕೆ.ಶಿವಕುಮಾರ್ ,ಶ ಜಯಮಾಲ ಮತ್ತು ಕೆ.ಪಿ.ಸಿ.ಸಿ.ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್.ಕೆ.ಪಾಟೀಲ್ ಮತ್ತು ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ.ಕೆ.ಶಿವರಾಂ ,ಕೆ.ಪಿ.ಸಿ.ಸಿ.ವಕ್ತಾರರಾದ ಮಂಜುಳಾ ನಾಯ್ಡು ,ಬೆಂಗಳೂರು ನಗರದ ಶಾಸಕರಾದ ಎಸ್.ಟಿ.ಸೋಮಶೇಖರ್ , ಬೈರತಿ ಬಸವರಾಜ್ ,ಬೈರತಿ ಸುರೇಶ್, ಅಜಯ್ ಸಿಂಗ್ ಮತ್ತು ಮಾಜಿ ಶಾಸಕರಾದ ಆರ್.ವಿ.ದೇವರಾಜ್,ಬೇಳೂರು ಗೋಪಾಲಕೃಷ್ಣ ,ಆರ್.ವಿ.ವೆಂಕಟೇಶ್ ಮಹಾಪೌರರಾದ ಗಂಗಾಬಿಕೆ ಮತ್ತು ಆಡಳಿತ ಪಕ್ಷದ ನಾಯಕರಾದ ಅಬ್ದುಲ್ ವಾಜೀದ್ ಮತ್ತಿತರರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap