ಆಟಗಾರರಿಗೆ ಕೊರೋನಾ : ಈ ಬಾರಿಯ IPL​ ಪಂದ್ಯಾವಳಿ ರದ್ದು!!

ನವದೆಹಲಿ : 

     ಕೆಲ ತಂಡಗಳ ಆಟಗಾರರು ಹಾಗೂ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿರುವ ಕಾರಣ ಐಪಿಎಲ್‌ ಪಂದ್ಯಾವಳಿಗಳನ್ನು ರದ್ದುಪಡಿಸಲಾಗಿದೆ.

       ಸನ್​ರೈಸರ್ಸ್​ ಹೈದ್ರಾಬಾದ್​ (SRH)​ ತಂಡದ ವೃದ್ಧಿಮಾನ್ ಸಹಾ ಮತ್ತು ಅಮಿತ್​ ಮಿಶ್ರಾಗೆ ಕೊರೋನಾ ಪಾಸಿಟಿವ್​ ದೃಢಪಟ್ಟ ಹಿನ್ನೆಲೆ, ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈವರೆಗೆ ಒಟ್ಟು ನಾಲ್ವರು ಆಟಗಾರರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಹೀಗಾಗಿ ಐಪಿಎಲ್​ 14 ನೇ ಆವೃತ್ತಿ ಪಂದ್ಯಾಟವನ್ನು ರದ್ದು ಮಾಡಲಾಗಿದೆ. ಮುಂದಿನ ಆದೇಶದರವರೆಗೆ ಐಪಿಎಲ್​ ಪಂದ್ಯಾವಳಿಯನ್ನು ರದ್ದು ಮಾಡಿ ಬಿಸಿಸಿಐ ಆದೇಶಿಸಿದೆ. 

      ಕೋವಿಡ್-19 ಸಾಂಕ್ರಾಮಿಕದ ಪಿಡುಗು ತೀವ್ರಗೊಂಡಿರುವ ಬೆನ್ನಲ್ಲೇ ಮಹತ್ವದ ನಿರ್ಧಾರ ಕೈಗೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಸಕ್ತ ಸಾಲಿನ ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸುವುದಾಗಿ ಮಂಗಳವಾರ ಘೋಷಿಸಿದೆ.

     ದೇಶದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವುದರ ನಡುವೆಯೂ ಐಪಿಎಲ್‌ ಪಂದ್ಯಾವಳಿ ನಡೆಸುತ್ತಿರುವುದಕ್ಕೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿತ್ತು. ಇದರ ಮಧ್ಯೆಯೂ ಐಪಿಎಲ್‌ ಪಂದ್ಯಾವಳಿಗಳನ್ನು ನಡೆಸಲಾಗುತ್ತಿತ್ತು. ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ಸಹ ಆಟಗಾರರ ಹಾಗೂ‍ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿತ್ತು.

      ಇದೀಗ ಬಿಸಿಸಿಐ ಅನಿವಾರ್ಯವಾಗಿ ಐಪಿಎಲ್‌ ಪಂದ್ಯಾವಳಿಗಳನ್ನು ರದ್ದುಗೊಳಿಸುವ ಕುರಿತು ಮಹತ್ವದ ತೀರ್ಮಾನ ಕೈಗೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap