ನವದೆಹಲಿ :
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಕನ್ನಡ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.
ಕಳೆದ 5 ತಿಂಗಳಿನಿಂದ ರಾಗಿಣಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಜಾಮೀನಿಗಾಗಿ ರಾಗಿಣಿ ಹಾಗೂ ಅವರ ಪೋಷಕರು ಸಾಕಷ್ಟು ಪ್ರಯತ್ನ ಪಡ್ತಾ ಇದ್ರು. ಆದ್ರೆ ಇತ್ತ ಸಿಸಿಬಿ ಪರ ವಕೀಲರು ಕೋರ್ಟ್ ನಲ್ಲಿ ಜಾಮೀನು ಕೊಡಬಾರದೆಂದು ವಾದಿಸುತ್ತಿದ್ದರು. ಹೀಗಾಗಿ ರಾಗಿಣಿಯ ಜಾಮೀನು ಅರ್ಜಿ ಕರ್ನಾಟಕ ಹೈಕೋರ್ಟ್ನಲ್ಲಿ ಎರಡು ಬಾರಿ ತಿರಸ್ಕಾರಗೊಂಡಿತ್ತು.
ಈ ಹಿಂದೆ ಸಂಜನಾ ಗಲ್ರಾನಿ ಅನಾರೋಗ್ಯದ ಕಾರಣ ನೀಡಿ, ಜೈಲಿನಜಂದ ಹೊರ ಹೋಗಿದ್ದರು. ಅದೇ ಹಾದಿಯಲ್ಲಿ ಸಾಗುತ್ತಿರುವ ರಾಗಿಣಿ ತಮಗೂ ಅನಾರೋಗ್ಯ ಸಮಸ್ಯೆ ಇದೆ ಎಂದು ಕಾರಣ ನೀಡಿದ್ದು, ಹೀಗಾಗಿ ಸುಪ್ರೀಂ ಕೋರ್ಟ್, ಅನಾರೋಗ್ಯದ ಆಧಾರದ ಮೇಲೆ ರಾಗಿಣಿಗೂ ಇಂದು ಜಾಮೀನು ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ