ರೈತರು, ವಲಸೆ ಕಾರ್ಮಿಕರು, ಸಣ್ಣ ವ್ಯಾಪಾರಿಗಳಿಗೆ ಪರಿಹಾರ ಪ್ಯಾಕೇಜ್!!

ನವದೆಹಲಿ: 

      ಮಹಾಮಾರಿ ಕರೊನಾ ವೈರಸ್ ತಡೆಗಟ್ಟಲು ಹೇರಲಾಗಿರುವ ಲಾಕ್​ಡೌನ್​ನಿಂದ ಕುಸಿತಕ್ಕೊಳಗಾಗಿರುವ ದೇಶದ ಆರ್ಥಿಕತೆಗ ಬಲ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿಗಳ ಬೃಹತ್ ಪ್ಯಾಕೇಜ್ ನ ಮೊದಲ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರದಂದು ನೀಡಿದ್ದರು. ಇದೀಗ ಈ ಆರ್ಥಿಕ ಪ್ಯಾಕೇಜಿನ ಎರಡನೇ ಹಂತದ ವಿವರಗಳನ್ನುಇಂದು ನೀಡುತ್ತಿದ್ದಾರೆ. 

       ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ಉದ್ಯಮದಾರರು, ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ಹಿಡುವಳಿ ರೈತರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿದರು. ಗ್ರಾಮೀಣ ಭಾಗದ ಜನತೆಗೆ ಬಂಪರ್​ ಕೊಡುಗೆ ನೀಡಿದ ವಿತ್ತ ಸಚಿವೆ, ಗ್ರಾಮೀಣಾಭಿವೃದ್ಧಿಗೆ 4200 ಕೋಟಿ ರೂ. ಹಾಗೂ ಕೃಷಿ ಉತ್ಪಾದನೆ ಹೆಚ್ಚಳಕ್ಕೆ 6700 ಕೋಟಿ ರೂ. ವಿಶೇಷ ಪ್ಯಾಕೇಜ್​ ಘೋಷಿಸಿದರು.

ಮುಖ್ಯ ಘೋಷಣೆಗಳು:

  • ಮಾರ್ಚ್ 1ಕ್ಕಿದ್ದ ಬೆಳೆ ಸಾಲದ ಮೇಲಿನ ಕಂತು ಪಾವತಿ ಅಂತಿಮ ದಿನಾಂಕವನ್ನು ಮೇ 31ಕ್ಕೆ ವಿಸ್ತರಣೆ.
  • ವಲಸೆ ಕಾರ್ಮಿಕರು ಹಾಗೂ ಬೀದಿ ವ್ಯಾಪಾರಿಗಳಿಗೆ 5 ಸಾವಿರ ಕೋಟಿ ರೂಪಾಯಿ ಸಾಲ. 50 ಲಕ್ಷ ಬೀದಿ  ವ್ಯಾಪಾರಿಗಳಿಗೆ ನೆರವು. ತಮ್ಮ ವ್ಯಾಪಾರ ಪುನರಾರಂಭಿಸಲು 10 ಸಾವಿರ ರೂಪಾಯಿ ನಿಗದಿ.
  •  ವಲಸೆ ಕಾರ್ಮಿಕರ ಹಿತ ಕಾಯಲು  ಮುಂದಿನ ಎರಡು ತಿಂಗಳು ಉಚಿತ ಆಹಾರ ಧಾನ್ಯ. 8 ಕೋಟಿ ವಲಸಿಗರಿಗೆ ಇದರಿಂದ ಉಪಯೋಗ.  
  • ಪಡಿತರ ಚೀಟಿ ಪೋರ್ಟಬಿಲಿಟಿ ಮಾಡಲು ಅವಕಾ‍ಶ. ಇದರ ಮೂಲಕ ದೇಶದ ಯಾವುದೇ ಸ್ಥಳದಲ್ಲಿ ಪಡಿತರ ಪಡೆದುಕೊಳ್ಳಲು ಅವಕಾಶ. ಇದರಿಂದ 67 ಕೋಟಿ ಪಡಿತರದಾರರಿಗೆ ಪ್ರಯೋಜನ.
  • ಕನಿಷ್ಠ 10 ಮಂದಿ ಕೆಲಸ ಮಾಡುವ ಸ್ಥಳಗಳಿಗೆ ಕನಿಷ್ಠ ವೇತನ ಸಿಗುವ ಕಾನೂನು
  • 14.62 ಲಕ್ಷ ಮಾನವ ಕೆಲಸ ಸೃಷ್ಟಿ

  • ರಾಜ್ಯ ವಿಪತ್ತು ನಿಧಿ ಬಳಸಿ ವಸತಿಹೀನರಿಗೆ ಮೂರು ಹೊತ್ತಿನ ಊಟ ನೀಡಲು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಅನುಮತಿ

  • ವಲಸೆ ಕಾರ್ಮಿಕರ ಬಾಡಿಗೆ ಮನೆಗಳಿಗೆ ನಿರ್ಧಿಷ್ಟ ಬಾಡಿಗೆ ನಿಗದಿಗೆ ಕ್ರಮ. ಎಲ್ಲಾ ರಾಜ್ಯ ಸರಕಾರಗಳಿಗೆ ಸೂಚನೆ.
  •  ತಮ್ಮ ತಮ್ಮ ರಾಜ್ಯಗಳಿಗೆ ಹಿಂದಿರುಗಿರುವ ವಲಸೆ ಕಾರ್ಮಿಕರ ದಾಖಲಾತಿಯನ್ನು ಸೂಕ್ತವಾಗಿ ಮಾಡಲು ಕ್ರಮ.
  • 25 ಲಕ್ಷ ಕಿಸಾನ್​ ಕಾರ್ಡ್​. 2.5 ಕೋಟಿ ರೈತರಿಗೆ ಕಿಸಾನ್​ ಕ್ರೆಡಿಟ್​​​​ ಕಾರ್ಡ್​ನಿಂದ ಉಪಯೋಗ
  • ರೈತರಿಗೆ 30 ಸಾವಿರ ಹೆಚ್ಚುವರಿ ತುರ್ತು ಸಾಲ. ಮೀನುಗಾರರಿಗೂ, ಪಶುಪಾಲಕರಿಗೆ ಇದರಿಂದ ಉಪಯೋಗ.
  • 12 ಸಾವಿರ ಸ್ವಸಹಾಯ ಸಂಘಗಳಿಂದ 3 ಕೋಟಿ ಮಾಸ್ಕ್ ತಯಾರಿ. 
  • 6 ರಿಂದ 8 ಲಕ್ಷ ವಾರ್ಷಿಕ ಆದಾಯ ಇರುವ ಮಧ್ಯಮ ಆದಾಯ ಹೊಂದಿರುವವರಿಗೆ ಸಬ್ಸಿಡಿ ವಿಸ್ತರಣೆ. 2.5 ಲಕ್ಷ ಕುಟುಂಬಗಳಿಗೆ ಇದರಿಂದ ಉಪಯೋಗ

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap