ಕೋಲ್ಕತ್ತದಿಂದ 4,00 ಕಿ.ಮೀ ದೂರದಲ್ಲಿರುವ ಬಲ್ಗೂರ್ನಲ್ಲಿ ಇಂದು ಬಿಜೆಪಿ ಸಮಾವೇಶ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಯೋಗಿ ಆದಿತ್ಯನಾಥ್ ಕೂಡ ಪಾಲ್ಗೊಳ್ಳುವವರಿದ್ದರು. ಆದರೆ, ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅನುಮತಿ ನೀಡಲು ಮಮತಾ ಬ್ಯಾನರ್ಜಿ ಸರ್ಕಾರ ನಿರಾಕರಿಸಿದೆ.
ಯಾವುದೇ ಸೂಕ್ತ ಕಾರಣ ನೀಡದೆಯೇ ಈ ರೀತಿ ಮಾಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ಆರೋಪಿಸಿದೆ. “ಯೋಗಿ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗೆ ಅನುಮತಿ ನೀಡಿಲ್ಲ. ಇದಕ್ಕೆ ಅವರು ಸೂಕ್ತ ಕಾರಣವನ್ನೂ ನೀಡಿಲ್ಲ. ಇದು ಯೋಗಿ ಪ್ರಖ್ಯಾತಿಯನ್ನು ಸೂಚಿಸುತ್ತದೆ. ಅವರು ಚುನಾವಣಾ ಪ್ರಚಾರಕ್ಕೆ ತೆರಳಿದರೆ ಮತಗಳು ಕಳೆದು ಹೋಗಬಹುದು ಎಂದು ಮಮತಾ ಈ ರೀತಿ ಮಾಡಿದ್ದಾರೆ,” ಎಂದು ಯೋಗಿ ಮಾಹಿತಿ ಸಲಹೆಗಾರ ಮೃತ್ಯುಂಜಯ್ ಕುಮಾರ್ ಹೇಳಿದ್ದಾರೆ.