ಲಖನೌ:
ಸಿಡಿಲ ಬಡಿತಕ್ಕೆ ಸುಮಾರು 32 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಉತ್ತರ ಪ್ರದೇಶದ ಹಲವಡೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭಾನುವಾರ ಸಂಭವಿಸಿದ ಸಿಡಿಲ ಬಡಿತಕ್ಕೆ ಸುಮಾರು 32 ಮಂದಿ ದಾರುಣವಾಗಿ ಸಾವಿಗೀಡಾಗಿದ್ದು, ಇಬ್ಬರು ವಿಷಕಾರಿ ಹಾವು ಕಡಿತಕ್ಕೆ ಒಳಗಾಗಿ ಅಸುನೀಗಿದ್ದಾರೆ. ಅಲ್ಲದೆ, 13 ಮಂದಿ ಸಿಡಿಲ ಬಡಿತದಿಂದ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಸಿಡಿಲಿಗೆ ಕಾನ್ಪುರ ಹಾಗೂ ಫತೇಹ್ಪುರ್ ಜಿಲ್ಲೆಯಿಂದ ತಲಾ ಏಳು ಮಂದಿ ಮೃತಪಟ್ಟಿದ್ದಾರೆ. ಝಾನ್ಸಿಯಿಂದ 5, ಜುಲೌನ್ನಿಂದ 4, ಹಮೀರ್ಪುರ 3, ಘಾಜಿಪುರ್ 2 ಹಾಗೂ ಜೌನ್ಪುರ್, ಪ್ರತಾಪ್ಗಢ, ಕಾನ್ಪುರ್ ದೆಹಾತ್ ಮತ್ತು ಚಿತ್ರಕೂಟ್ ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರು ಮರಣ ಹೊಂದಿದ್ದಾರೆ.
ಸಿಡಿಲು ಬಡಿದು ಹಾಗೂ ಹಾವು ಕಚ್ಚಿ ಸಾವನ್ನಪ್ಪಿರುವ ಕುಟುಂಬಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಸಾಂತ್ವಾನ ಹೇಳಿದ್ದು, ಸಂತ್ರಸ್ತ ಕುಟುಂಬಸ್ಥರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
