ಚೆನ್ನೈ :

ತೆರಿಗೆ ವಂಚನೆ ಆರೋಪದ ಮೇಲೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ನೀಡಿದೆ.
ರೆಹಮಾನ್ ಅವರು 2011-12 ರಲ್ಲಿ 15.98 ಕೋಟಿ ರೂ. ಆದಾಯವನ್ನು ಘೋಷಿಸಿದ್ದರು. 2014 ರಲ್ಲಿ ತೆರಿಗೆ ಇಲಾಖೆ ಇದನ್ನು ಅಂಗೀಕರಿಸಿತ್ತು. ಆದರೆ ಇದರಲ್ಲಿ ಪೋಟಾನ್ ಕಥಾಸ್ ಪ್ರೋಡಕ್ಷನ್ ನಿಂದ ಪಡೆದ 54 ಲಕ್ಷ ರೂಪಾಯಿ ಹಾಗೂ ಯುಕೆ ಮೂಲಕ ಲೆಬರಾ ಮೊಬೈಲ್ ಸಂಸ್ಥೆಯಿಂದ ಪಡೆದ 3.47 ಕೋಟಿ ರೂ. ಬಗ್ಗೆ ವಿವರಗಳನ್ನು ನೀಡಿಲ್ಲ ಎಂದು ಆದಾಯ ತೆರಿಗೆ ಪ್ರಧಾನ ಆಯುಕ್ತರು ಚೆನ್ನೈ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ವಿಚಾರಣೆ ನಡೆಸಿರುವ ಚೆನ್ನೈ ಹೈಕೋರ್ಟ್ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಗೆ ನೋಟಿಸ್ ನೀಡಲಾಗಿದೆ. ಹೀಗಾಗಿ ರೆಹಮಾನ್ ಮತ್ತೆ ತೆರಿಗೆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಬೇಕಾಗಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








