ಸತ್ತ ತಾಯಿ ಶವದೊಂದಿಗೆ ವರ್ಷದಿಂದ ಮಗನ ವಾಸ!

ಸ್ಪೇನ್ :

     ಒಂದು ವರ್ಷದ ಹಿಂದೆ ಸತ್ತ ತಾಯಿಯ ಶವವನ್ನು ಮನೆಯಲ್ಲೇ ಇರಿಸಿಕೊಂಡು ಜೀವನ ನಡೆಸುತ್ತಿದ್ದ ಮಗನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

      92 ವರ್ಷ ವಯಸ್ಸಿನ ತಾಯಿ ಸತ್ತು ಸುಮಾರು ಒಂದು ವರ್ಷವಾಗಿದ್ದರೂ ಆಕೆಯ ದೇಹದ ಅಂತ್ಯ ಸಂಸ್ಕಾರ ಮಾಡದ ಪುತ್ರ, ಪ್ರತಿ ತಿಂಗಳೂ ಆಕೆಗೆ ಬರುತ್ತಿದ್ದ ಪೆನ್ಷನ್ ಹಣವನ್ನು ಪಡೆದುಕೊಳ್ಳುತ್ತಿದ್ದ.

       ಆದರೆ ಕೆಲ ದಿನಗಳಿಂದ ಈ ಮನೆಯಿದ ಕೆಟ್ಟ ವಾಸನೆ ಬರುತ್ತಿದ್ದರಿಂದ ಮತ್ತು ಆತನ ತಾಯಿ ಕಾಣಿಸಿಕೊಳ್ಳದ ಕಾರಣ ಅನುಮಾನ ಬಂದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಬಂದು ತನಿಖೆ ನಡೆಸಿದಾಗ, ತಾಯಿಯ ಶವ ಇರುವುದು ಕಂಡುಬಂದಿದೆ.

      ತಾಯಿ ವಯೋಸಹಜ ಕಾಯಿಲೆಯಿಂದ ಮೃತರಾಗಿದ್ದರು. “ಹಣದ ಅಗತ್ಯ ಇದ್ದಿದ್ದರಿಂದ ನಾನು ಅಮ್ಮನ ಸಾವನ್ನು ಮುಚ್ಚಿಟ್ಟೆ. ನನ್ನ್ ಜೀವನಕ್ಕೆ ಅವರ ಪೆನ್ಷನ್ ಹಣದ ಅಗತ್ಯ ತುಂಬಾ ಇತ್ತು ಎಂದು 62 ವರ್ಷ ವಯಸ್ಸಿನ ಆಕೆಯ ಪುತ್ರ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap