ಭಾರತದ ಪೈಲಟ್ ನಾಪತ್ತೆ : ಖಚಿತಪಡಿಸಿದ ವಿದೇಶಾಂಗ ಇಲಾಖೆ

ನವದೆಹಲಿ:
    ಭಾರತೀಯ ವಾಯು ಸೇನೆ ಪಾಕಿಸ್ತಾನದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆಯ ವೇಳೆ ನಮ್ಮ ಮಿಗ್-21 ವಿಮಾನ ಪತನವಾಗಿದೆ. ಈ ವೇಳೆ ಆ ವಿಮಾನದ ಓರ್ವ ಪೈಲಟ್ ನಾಪತ್ತೆಯಾಗಿರುವುದು ಖಚಿತವಾಗಿದೆ.
     ಸುದ್ಧಿ ಗೋಷ್ಠಿಯಲ್ಲಿ ಮಾತನಾಡಿದ ವಾಯುಸೇನೆ ಮುಖ್ಯಸ್ಥ ಏರ್​ ವೈಸ್​​ ಮಾರ್ಷಲ್​​ ಆರ್​ಜಿಕೆ ಕಪೂರ್ ಅವರು, ಪಾಕ್​ ಎಫ್​- 16 ವಿಮಾನದ ಮೂಲಕ ಪ್ರತ್ಯುತ್ತರ ನೀಡುವ ಯತ್ನ ಮಾಡಿತ್ತು. ಆದರೆ ಭಾರತೀಯ ಸೇನೆ ಪಾಕಿಸ್ತಾನದ ದಾಳಿಯನ್ನ ಸಮರ್ಥವಾಗಿ ಎದುರಿಸಿದೆ. ಪಾಕಿಸ್ತಾನದ ನೆಲದಲ್ಲಿ ಇಬ್ಬರು ಪೈಲಟ್​​ಗಳು ಜಿಗಿದಿರುವುದನ್ನು ನಮ್ಮ ಭೂಸೇನೆ ಗಮನಿಸಿದ್ದು, ನಮ್ಮ ಪೈಲಟ್​ ಒಬ್ಬರು ನಾಪತ್ತೆಯಾಗಿರುವುದು ಖಚಿತವಾಗಿದೆ ಎಂದಿದ್ದಾರೆ.
     ನಾಪತ್ತೆಯಾಗಿರುವ ಪೈಲಟ್ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ನಮ್ಮ ವಶದಲ್ಲಿದ್ದಾರೆ ಎಂದು ಪಾಕಿಸ್ತಾನ ವೀಡಿಯೋ ಸಮೇತ ಹೇಳಿಕೊಂಡಿದೆ. ಈ ಬಗ್ಗೆ ನಮಗೆ ಅಧಿಕೃತವಾಗಿ ಸಂದೇಶ ಕಳಿಸಿಲ್ಲ. ಈ ಬಗ್ಗೆ ಪರಿಶೀಲನೆ ಜಾರಿಯಲ್ಲಿದೆ ಎಂದು ರವೀಶ್ ಕುಮಾರ್ ಹೇಳಿದರು.
      ಐಎಎಫ್ ಪೈಲಟ್ ಈಗ ಪಾಕಿಸ್ತಾನದ ವಶದಲ್ಲಿರುವುದರ ಬಗ್ಗೆ ಅಧಿಕೃತವಾಗಿ ಮಾಹಿತಿ ಸಿಕ್ಕ ಬಳಿಕ ಭಾರತ ಯಾವ ರೀತಿ ರಾಜತಾಂತ್ರಿಕ ನಡೆ ಇಡಲಿದೆ ಕಾದುನೋಡಬೇಕಿದೆ. ವಿಶ್ವಸಂಸ್ಥೆಗೆ ಈ ಬಗ್ಗೆ ತಿಳಿಸಿ, ಪೈಲಟ್ ಬಿಡುಗಡೆಗೆ ಮನವಿ ಸಲ್ಲಿಸಬಹುದು ಎಂದು ರಕ್ಷಣಾ ತಂತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap