ಎಂ ಎನ್ ಕೋಟೆ :
ಸುಮಾರು ವರ್ಷಗಳ ನಂತರ ಬೆಟ್ಟದಹಳ್ಳಿ ಗವಿಮಠದ ಶಾಖಾ ಮಠವಾದ ಅನುಭವ ಮಂಟಪದಲ್ಲಿ 846ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯುತ್ತಿದೆ.
ಮೂರು ಲಕ್ಷ ಭಕ್ತರು ಬರುವ ಸಾಧ್ಯತೆ ಇದೆ.ರಾಷ್ವ್ರೀಯ ಹೆದ್ದಾರಿಯ ಉದ್ದಕ್ಕೂ ಈಗಾಗಲೇ ಹೆಚ್ಚು ಪ್ಲೇಕ್ಸ್ ಗಳನ್ನು ಕಟ್ಟಲಾಗಿದೆ. ಕಾರ್ಯಕ್ರಮ ನಡೆಯುವ ಅಲ್ಲಮ್ಮ ಪ್ರಭುದೇವರ ವೇಧಿಕೆಯ ಸುತ್ತಣ 200 ಮೀಟರ್ ಅಂತರದಲ್ಲಿ ಪ್ಲೇಕ್ಸ್ ನಿಷೇಧಿಸಲಾಗಿದೆ.40 ಎಕರೆಯಲ್ಲಿ ಕಾರ್ಯಕ್ರಮ ವೇದಿಕೆ ಸಂಭಾಗಣ ನಿರ್ಮಿಸಲಾಗಿದೆ.ಅಲ್ಲಲ್ಲಿ ನೀರು ಹಾಕಿ ದೂಳನ್ನು ಕಡಿಮೆಗೊಳಿಸಲಾಗಿದೆ.
ಜಿಲ್ಲೆಯ ವಿವಿಧಡೆ ಭಕ್ತರು ಧನಸಹಾಯ ಹಾಗೂ ತನು ಮನ ಧನ ಸಹಾಯ ಮಾಡಿದ್ದಾರೆ.ಶರಣರು,ಸಾಹಿತ್ಯ,ಚಿಂತಕರು ಭಕ್ತರು ಮಠದ ಹಿರಿಯ ವಿದ್ಯಾರ್ಥಿಗಳು ಹಾಗೂ ಶ್ರೀಮಠದ ಸಂಸ್ಥೆಯ ಶಿಕ್ಷಕರು ಉಪನ್ಯಾಸಕರು ಜಯಂತಿ ಯಶಸ್ಸಿಗಾಗಿ ಕೆಲಸ ಮಾಡುತ್ತಿದ್ದಾರೆ.
ಮುಖ್ಯ ವೇಧಿಕೆಯಲ್ಲಿ ಕವಿಗೋಷ್ಠಿ,ಯುವಗೋಷ್ಠಿ, ಮಹಿಳಾಗೋಷ್ಠಿ, ಸಾಹಿತ್ಯ ಗೋಷ್ಠಿಗಳು ನಡೆಯುತ್ತವೆ.ಅಲ್ಲದೇ 30ಕ್ಕೂ ಹೆಚ್ಚು ಕೃತಿಗಳು ಬಿಡುಗಡೆಯಾಗಲಿವೆ.ಕೃಷಿ, ವ್ಯಾಪಾರ, ಪುಸ್ತಕ,ವಸ್ತುಪ್ರದರ್ಶನ ಮಳಿಗೆಗಳು ಜಾಗ ನಿಗದಿ ಮಾಡಿಕೊಂಡಿದ್ದಾರೆ.ಊಟ ತಯಾರಿಕೆಗಾಗಿ ತುಮಕೂರಿನ ಎಸ್ ಜಿ ಎಸ್ ಅಡಿಗೆ ಗ್ರೋಪ್ ನ 200ಕ್ಕೂ ಅಧಿಕ ಬಾಣಸಿಗರು, ಮಾಲ್ದಿಪುಡಿ, ಪುಳಿಯೂಗರಿ ಪುಡಿ , ಸಾಂಬಾರು ಪದಾರ್ಥ ತಯಾರಿಸಿಕೊಳ್ಳವಲ್ಲಿ ನಿರತರಾಗಿದ್ದರು.
ತುಮಕೂರಿನನಲ್ಲಿ ನೆಡೆದ ಎಲ್ಲ ಸಿದ್ದರಾಮ ಜಯಂತಿಗೆ ಪೆಂಡಾಲ್ ಅಳವಡಿಸಿದ್ದ ಕೆ.ಬಿ.ಕ್ರಾಸ್ ರವಿ ಇಲ್ಲಿಯೂ ಬೃಹತ್ ವೇದಿಕೆ ನಿರ್ಮಿಸಿದ್ದಾರೆ.40×80 ಅಳತೆಯ ವೇಧಿಕೆಯಲ್ಲಿ ಗಣ್ಯರು ಕುಳಿತುಕೊಳಲ್ಲು ವ್ಯವಸ್ಥೆ ಮಾಡಲಾಗಿದೆ.ಇದಕ್ಕೆ ಹಿಂಭಾಗದಲ್ಲಿ 12×40 ಅಳತೆಯ ಬೃಹತ್ ಬ್ಯಾಕ್ ಸ್ಕ್ರೀನ್ ಎಲ್ ಇಡಿ ಪರದೆ ಅಳವಡಿಸಲಾಗಿದೆ.ದೇವರುಗಳನ್ನು ಗದ್ದುಗೆ ಮಾಡಲು ವೇದಿಕೆ ನಿರ್ಮಾಣ ಮಾಡಲಾಗಿದೆ.
20ಸಾವಿರ ಆಸನಗಳನ್ನು ಹಾಕಲಾಗಿದೆ.8ಕಡೆ ವೇದಿಕೆ ಕಾರ್ಯಕ್ರಮ ವೀಕ್ಷಿಸಲು ಬೃಹತ್ ಎಲ್ ಇಡಿ ಪರದೆ ಹಾಕಲಾಗಿದೆ.ವೇಧಿಕೆಯ ಸುತ್ತಲು ಸಿಸಿ ಕ್ಯಾಮರಗಳನ್ನು ಹಾಕಲಾಗಿದೆ.ಕಾರ್ಯಕ್ರಮಕ್ಕೆ ಬರುವ ಸ್ವಾಮೀಜಿಗಳಿಗೆ ಸಕಲ.ಸಿದ್ದತೆಗಳನ್ನು ಮಾಡಲಾಗಿದೆ.ಎಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಶಂಕರನಂದ್ ತಿಳಿಸಿದ್ದಾರೆ.
ಭಕ್ತರಿಗೆ ಊಟದ ವ್ಯವಸ್ಥೆ : ಜ.14ರ ಬೆಳಿಗ್ಗೆ ಅವರೆಕಾಳು ಉಪ್ಪಿಟ್ಟು, ಕೇಸರಿಬಾತ್,ಮಧ್ಯಾಹ್ನ ಮಾಲ್ದಿಪುಡಿ,ಪಾಯಸ,ರೈಸ್ ಬಾತ್ ,ಅನ್ನ ಸಾಂಬಾರ್, ರಸಂ,ಮೊಸರನ್ನ ಮಜ್ಜಿಗೆ ಪ್ಯಾಕೆಟ್ ಮಾಡಲಾಗುತ್ತದೆ.ರಾತ್ರಿ ಪಲ್ಲಾವ್, ರೈಸ್ ಬಾತ್,ಮಾಡಲಾಗುತ್ತದೆ.
ಜ.15 ರಂದು ಬೆಳಿಗ್ಗೆ ಚಿತ್ರಾನ್ನ, ಅಕ್ಕಿ ಉಪ್ಪಿಟ್ಟು, ಪೊಂಗಲ್, ಮಧ್ಯಾಹ್ನ ಟಮೊಟೊ ಬಾತ್, ಅನ್ನ ಸಾಂಬಾರ್, ರಾತ್ರಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.70 ಊಟದ ಕೌಂಟರ್ ಗಳನ್ನು ಮಾಡಲಾಗಿದೆ.ಊಟದ ವ್ಯವಸ್ಥೆ ಮಾಡಿರುವ 40 ಕಡೆಗಳಲ್ಲಿ ಸಿಸಿ ಕ್ಯಾಮರ ಅಳವಡಿಸಲಾಗಿದೆ.ಎಂದು ಕಾರ್ಯಕ್ರಮದ ಸಂಚಾಲಕ ಊಟದ ಉಸ್ತುವರಿ ವಹಿಸಿರುವ ಬಿ ಎಂ ನಂಜುಂಡಪ್ಪ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ