ದೆಹಲಿ :
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರ ಅಕೌಂಟ್ ಹ್ಯಾಕ್ ಮಾಡಿ 20 ಲಕ್ಷ ರೂ. ಕಳವು ಮಾಡಿರುವ ಘಟನೆ 4 ದಿನಗಳ ಹಿಂದೆ ನಡೆದಿದ್ದು, ಇಂದು ತಡವಾಗಿ ಬೆಳಕಿಗೆ ಬಂದಿದೆ.
ಪ್ರತಿಯೊಬ್ಬ ಸಂಸದರಿಗೂ ಸಂಸತ್ ಭವನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ತೆರೆಯಲಾಗಿರುತ್ತದೆ. ಸಂಸದರ ವೇತನ, ಇತರೆ ಭತ್ಯೆಗಳು ನೇರವಾಗಿ ಈ ಬ್ಯಾಂಕಿನ ಖಾತೆಗೆ ಸಂದಾಯವಾಗುತ್ತದೆ. ಹಲವು ಸಂಸದರು ಈ ಖಾತೆಗೆ ಬರುವ ಹಣವನ್ನು ಎಷ್ಟೋ ವರ್ಷಗಳವರೆಗೂ ಬಳಸಿಕೊಳ್ಳದೆ ಹಾಗೆ ಬಿಟ್ಟಿರುತ್ತಾರೆ.
ಶೋಭಾ ಅವರು ಮೊಬೈಲ್ನಿಂದ ತಮ್ಮ ನೆಟ್ ಬ್ಯಾಂಕಿಂಗ್ ಖಾತೆಯನ್ನು ನಿರ್ವಹಿಸುವಾಗ ಹ್ಯಾಕ್ ಮಾಡಿ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಹ್ಯಾಕ್ ಆಗಿರುವುದನ್ನು ಸ್ವತಃ ಕರಂದ್ಲಾಜೆ ಅವರೇ ಒಪ್ಪಿಕೊಂಡಿದ್ದಾರೆ. ಆದರೆ, ವಿಷಯ ದೊಡ್ಡದು ಮಾಡಲು ಇಷ್ಟವಿಲ್ಲ ಎಂದು ಹೇಳಿ, ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಅವರು ನಿರಾಕರಿಸಿದ್ದಾರೆ.
ಈ ಸಂಬಂಧ ಶೋಭಾ ಕರಂದ್ಲಾಜೆ ಅವರು ಸಂಸತ್ ಭವನ ಮಾರ್ಗದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ