ಧೋನಿಗೆ ಭಾವನಾತ್ಮಕ ಪತ್ರ ಬರೆದ ಪ್ರಧಾನಿ ಮೋದಿ!!

ನವದೆಹಲಿ:

       ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಂಡಿರುವ ಮಹೇಂದ್ರ ಸಿಂಗ್​ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದಿದ್ದಾರೆ. ಇದೀಗ ಅವರಿಗೆ ಧೋನಿ ಧನ್ಯವಾದ ಸಲ್ಲಿಸಿದ್ದಾರೆ.

      ” ಪ್ರಿಯ ಮಹೇಂದ್ರ, ಆಗಸ್ಟ್ 15ರಂದು ಎಂದಿನ ನಿರ್ಭೀತ ಶೈಲಿಯಲ್ಲಿ ನೀವು ಪೋಸ್ಟ್ ಮಾಡಿದ ಸಣ್ಣ ವಿಡಿಯೋ ಇಡೀ ರಾಷ್ಟ್ರವನ್ನೇ ಚರ್ಚೆಯ ಕೇಂದ್ರವನ್ನಾಗಿಸಲು ಕಾರಣವಾಯಿತು.

      ದೇಶದ 130 ಕೋಟಿ ಜನರು ನಿರಾಶರಾದರು ಆದರೆ ಒಂದುವರೆ ದಶಕದಿಂದ ಭಾರತೀಯ ಕ್ರಿಕೆಟ್ ಗೆ ನೀವು ಸಲ್ಲಿಸಿರುವ ಸೇವೆಗೆ ಖಂಡಿತ ಕೃತಜ್ಞರಾಗಿರುತ್ತಾರೆ” ಹೀಗೆಂದು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ.    

     ಪ್ರಧಾನಿ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಧೋನಿ, ಒಬ್ಬ ಕ್ರೀಡಾಪಟು, ಕಲಾವಿದ, ಸೈನಿಕರು ಮೆಚ್ಚುಗೆಗಾಗಿ ಹಂಬಲಿಸುತ್ತಾರೆ. ತಮ್ಮ ಪರಿಶ್ರಮ, ತ್ಯಾಗ ಮನ್ನಣೆಗೆ ಪಾತ್ರವಾಗಬೇಕು ಎಂದು ಅಪೇಕ್ಷಿಸುತ್ತಾರೆ. ತಮ್ಮ ಮೆಚ್ಚುಗೆ ಮತ್ತು ಶುಭಾಶಯಗಳಿಗೆ ಧನ್ಯವಾಗಳು ಎಂದು ಟ್ವೀಟ್ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap