ನವದೆಹಲಿ:
ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಕೊಲೆ ಪ್ರಕರಣದ ನಾಲ್ವರು ಆರೋಪಿಗಳನ್ನು ಗಲ್ಲಿಗೇರುವ ದಿನಾಂಕ ಬಹುತೇಕ ಫಿಕ್ಸ್ ಆಗಿದ್ದು, ದಿನಗಣನೆ ಆರಂಭವಾಗಿದೆ.
ರಾಷ್ಟ್ರಪತಿಯವರು ನಾಲ್ವರು ಆಪಾದಿತರಿಗೆ ಮರಣದಂಡನೆಯಿಂದ ಕ್ಷಮಾದಾನ ನೀಡಲು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ತಿಹಾರ್ ಜೈಲಿನಲ್ಲಿ ಡಿ.16 ರಂದು ಬೆಳಗ್ಗೆ 5 ಗಂಟೆಗೆ ನಾಲ್ವರು ಆರೋಪಿಗಳನ್ನು ನೇಣುಗಂಬಕ್ಕೇರಿಸಲಾಗುತ್ತದೆ ಎಂಬುದು ಖಚಿತವಾಗಿದೆ ಎನ್ನಲಾಗಿದೆ.
ಇದಕ್ಕಾಗಿ ತಿಹಾರ್ ಜೈಲಿನಲ್ಲಿ ಎಲ್ಲಾ ತಯಾರಿ ಆರಂಭಗೊಂಡಿದೆ. ಡಿಸೆಂಬರ್ 16ಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಗಲ್ಲಿಗೇರಿಸುವ ಸ್ಥಳದ ಸ್ವಚ್ಛತೆ ಹಾಗೂ ಗಲ್ಲಿಗೇರಿಸುವ ವ್ಯಕ್ತಿಗಾಗಿ ಹುಡುಕಾಟ ಹೀಗೆ ಎಲ್ಲವೂ ಜೈಲು ಸಿಬ್ಬಂದಿ ಆರಂಭಿಸಿದ್ದಾರೆ.
ಕಳೆದ ಮೂರು ದಿನಗಳ ಹಿಂದೆಯಷ್ಟೆ ನಿರ್ಭಯಾ ಅತ್ಯಾಚಾರಿ ಮತ್ತು ಹಂತಕರ ಕ್ಷಮಾದಾನ ಅರ್ಜಿಯನ್ನು ಕೇಂದ್ರ ಗೃಹ ಸಚಿವಾಲಯ ಸರಾಸಗಟಾಗಿ ತಳ್ಳಿ ಹಾಕಿ ಅಂತಿಮ ನಿರ್ಧಾರಕ್ಕಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಲಾಗಿತ್ತು. ಅಲ್ಲೂ ಇದು ತಿರಸ್ಕೃತಗೊಂಡಿದೆ.
ಪೈಶಾಚಿಕ ಕೃತ್ಯ ನಡೆದ ಏಳು ವರ್ಷಗಳ ನಂತರ ಮುಖೇಶ್, ವಿನಯ್, ಅಕ್ಷಯ್ ಮತ್ತು ಪವನ್ ಈ ಅಪರಾಧಿಗಳಿಗೆ ಗಲ್ಲಿಗೇರಿಸಲಾಗುತ್ತಿದ್ದು, ನಿರ್ಭಯಾ ಕುಟುಂಬಕ್ಕೆ ಕೊನೆಗೂ ನ್ಯಾಯ ಲಭಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ