ಮತ್ತೆ ಏರಿಕೆಯಾಯ್ತು LPG ಸಿಲಿಂಡರ್ ದರ!!!

ನವದೆಹಲಿ:

      ಹೊಸ ವರ್ಷದ ಆರಂಭ ದಿನದಂದು ಎಲ್.ಪಿ.ಜಿ. ಸಿಲಿಂಡರ್ ದರವನ್ನು ಸತತ 5ನೇ ತಿಂಗಳು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೆಷನ್(ಐಒಸಿ) ಆದೇಶ ನೀಡಿದೆ.

       ಡಿಸೆಂಬರ್ 31 ರವರೆಗೆ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 695 ರೂಪಾಯಿ ಆಗಿದ್ದು, ಹೊಸ ಬೆಲೆ 714 ರೂಪಾಯಿ ಆಗಿದೆ. ಅಂತೆಯೇ ಈ ಬಾರಿ ಎಲ್ಪಿಜಿ ಸಿಲಿಂಡರ್ ಬೆಲೆ 19 ರೂಪಾಯಿ ಜಾಸ್ತಿಯಾಗಿದೆ.  ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತ ಆಧರಿಸಿ ಪ್ರತಿ ತಿಂಗಳು ಎಲ್ಪಿಜಿ ದರ ಬದಲಾವಣೆ ಮಾಡಲಾಗ್ತಿದೆ.

      ಅಕ್ಟೋಬರ್ 01ರಿಂದ ದೆಹಲಿಯಲ್ಲಿ, 14.2 ಕೆ.ಜಿ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ಬೆಲೆ 605 ರೂಪಾಯಿ (590 ರೂ.ಈ ಹಿಂದಿನ ದರ) ಯಾಗಿದೆ. 19 ಕೆ.ಜಿ ಸಿಲಿಂಡರ್ ಬೆಲೆ 1085 ರೂಪಾಯಿಯಾಗಿದೆ. ಮುಂಬೈಯಲ್ಲಿ ಸಬ್ಸಿಡಿ ರಹಿತ ಅನಿಲ ಸಿಲಿಂಡರ್ ಬೆಲೆ 684.50 ರು (ಹಳೆ ದರ665ರು), ಕೋಲ್ಕತ್ತಾದಲ್ಲಿ 747 ರು(725.5 ರು) ಹಾಗೂ ಚೆನ್ನೈನಲ್ಲಿ734 ರು (714ರು). 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಕೂಡ ಪರಿಷ್ಕರಿಸಲಾಗಿದ್ದು ದೆಹಲಿಯಲ್ಲಿ 1241 ರೂ., ಕೊಲ್ಕತ್ತಾದ 1308. 50 ರೂ., ಮುಂಬೈನಲ್ಲಿ 1190 ರೂ., ಚೆನ್ನೈನಲ್ಲಿ 1363 ರೂಪಾಯಿ ಇದೆ. ಪರಿಷ್ಕೃತ ದರಗಳು ಜನವರಿ 01 ರಿಂದ ಜಾರಿಗೆ ಬರಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ