ಚೆನ್ನೈ:
ಕಾಲಿವುಡ್‌ನ ಸಿನಿಮಾದ ಹಿರಿಯ ನಿರ್ದೇಶಕ ಜೆ. ಮಹೇಂದ್ರನ್ ಅನಾರೋಗ್ಯದಿಂದ ಮಂಗಳವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಮಹೇಂದ್ರನ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಬಳಿಕ ಮಾ. 27 ರಂದು ಅವರನ್ನು ಕಳೆದ ವಾರ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಮೂಲಗಳ ಪ್ರಕಾರ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ಆದರೆ ಸೋಮವಾರ ರಾತ್ರಿ ಅವರನ್ನು ಮನೆಗೆ ಕರೆತರಲಾಗಿತ್ತು ಎನ್ನಲಾಗಿದೆ.
ಜೆ. ಮಹೇಂದ್ರನ್ ಅವರ ನಿಧನದ ಬಗ್ಗೆ ಅವರ ಪುತ್ರ ಜಾನ್ ಮಹೇಂದ್ರನ್ ಟ್ವಿಟ್ಟರ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
DIRECTOR MAHENDRAN PASSED AWAY THIS MORNING. pic.twitter.com/usCPXX7Qsr
— Dir.JohnMahendran (@johnroshan) April 2, 2019
ಇಂದು ಬೆಳಗ್ಗೆ 10 ಗಂಟೆಯಿಂದ ಮಹೇಂದ್ರನ್ ಅವರ ನಿವಾಸದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗುವುದು. ಸಂಜೆ 5 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ ಎನ್ನಲಾಗಿದೆ.
79 ವರ್ಷದ ಮಹೇಂದ್ರನ್ ಅವರು ಮುಲ್ಲಮ್ ಮಲರಮ್, ಜಾನಿ ಮತ್ತು ನೆಂಜಥಾಯ್ ಕಿಲ್ಲಾದೆಯ್, ಉತ್ತಿರಿ ಪೂಕಾಲ್ ಎಂಬ ಹಲವು ಸಿನಿಮಾ ನೀಡಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ಸೇತುಪತಿ ನಟನೆಯ ಸೀತಾಪತಿ, ರಜನಿಕಾಂತ್ ನಟನೆಯ ಪೆಟ್ಟಾ ಚಿತ್ರಗಳನ್ನು ನಿರ್ದೇಶಿಸಿದ್ದರು ಮತ್ತು ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಅಥರ್ವ ಮುರಳಿ ನಟನೆಯ ಬೂಮರಾಂಗ್ ಚಿತ್ರದಲ್ಲಿ ನಟಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ