ನವದೆಹಲಿ:
ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾಲಯದಲ್ಲಿ ನಡೆದಿದ್ದ ಹಿಂಸಾಚಾರದ ತನಿಖೆ ಕೈಗೆತ್ತಿಕೊಂಡ ದೆಹಲಿ ಪೊಲೀಸರು ಪ್ರಕರಣ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ.
ಅಂದು ಪ್ರತಿಭಟನೆ ನಡೆಸುತ್ತಿದ್ದ ಜೆಎನ್ಎಸ್ ಯು ಅಧ್ಯಕ್ಷೆ ಐಶೆ ಘೋಷ್ ಅವರನ್ನೂ ದಾಳಿ ನಡೆಸಿದ ದಾಳಿಕೋರರ ಶಂಕಿತ ಪಟ್ಟಿಗೆ ಸೇರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಹಿಂಸಾಚಾರ ಪ್ರಕರಣದಲ್ಲಿ ದಾಳಿ ನಡೆಸಿದ ಶಂಕಿತ ದಾಳಿಕೋರರ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಪಟ್ಟಿಯಲ್ಲಿ ಜೆಎನ್ ಯು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶೆ ಘೋಷ್ ಅವರ ಹೆಸರೂ ಕೂಡ ಇರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಇತರೆ 8 ಮಂದಿ ಶಂಕಿತರ ಪಟ್ಟಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಎಂಎಸ್ ರಾಂಧವ ಈ ವರೆಗೆ ತನಿಖಾಧಿಕಾರಿಗಳು ಕಲೆಹಾಕಿರುವ ಮಾಹಿತಿಗಳ ಪ್ರಕಾರ ಜೆಎನ್ ಯು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಸಿದಂತೆ ಶಂಕಿತ ದಾಳಿಕೋರರನ್ನು ಗುರುತಿಸಲಾಗಿದೆ. ಶಂಕಿತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದರು.