ಸ್ವಿಸ್ ಬ್ಯಾಂಕ್ ನಿಂದ 11 ಭಾರತೀಯರಿಗೆ ನೋಟಿಸ್!!

ಹೊಸದಿಲ್ಲಿ:

      ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಇರಿಸಿರುವ 11 ಭಾರತೀಯರಿಗೆ ಹಣದ ಮೂಲ, ಹೆಸರು ಸೇರಿದಂತೆ ಇನ್ನಿತರೆ ಮಾಹಿತಿ ನೀಡುವಂತೆ ನೋಟಿಸ್‌ ನೀಡಿದೆ.

      ಸ್ವಿಜರ್ಲೆಂಡ್‌ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಸಂಗ್ರಹಿಸಿರುವ ಪ್ರಕರಣ ಸಂಬಂಧ ಕಠಿಣ ಕ್ರಮ ಕೈಗೊಳ್ಳಲು ಸ್ವಿಸ್‌ ಬ್ಯಾಂಕ್‌ಗಳು ನಿರ್ಧರಿಸಿದ್ದು, ಮಾರ್ಚ್‌ 21 ರಂದು 11 ಭಾರತೀಯರಿಗೆ ನೋಟಿಸ್‌ ನೀಡಿದೆ. ಅದಕ್ಕೂ ಮುನ್ನ ಒಂದು ಸುತ್ತಿನಲ್ಲಿ ಸುಮಾರು 25 ನಾಗರಿಕರಿಗೆ ನೋಟಿಸ್‌ ನೀಡಿತ್ತು. ನೋಟಿಸ್‌ ಪಡೆದವರು ಒಂದು ತಿಂಗಳ ಒಳಗಾಗಿ ಸ್ವಿಸ್‌ ಬ್ಯಾಂಕ್‌ಗೆ ತಮ್ಮ ಸಂಪೂರ್ಣ ವಿವರಗಳನ್ನು ನೀಡಬೇಕಿದೆ.

      11 ಮಂದಿಯಲ್ಲಿ ಇಬ್ಬರ ಹೆಸರನ್ನು ಮಾತ್ರ ಬಹಿರಂಗಪಡಿಸಿರುವ ಬ್ಯಾಂಕ್, ಉಳಿದ 9 ಮಂದಿಯ ಹೆಸರಿನ ಬದಲಾಗಿ ಅವರ ಹೆಸರಿನ ಇನಿಷಿಯಲ್‌‌ಗಳು ಹಾಗೂ ಹುಟ್ಟಿದ ದಿನಾಂಕವನ್ನು ಮಾತ್ರ ತಿಳಿಸಿದೆ. ಕೃಷ್ಣ ಭಗವಾನ್‌ ರಾಮಚಂದ್‌, ಕಲ್ಪೇಶ್‌ ಹರ್ಷದ್‌ ಕಿನಾರಿವಾಲಾ  ಪೂರ್ಣ ಹೆಸರು ಹೊಂದಿರುವವರು.

       ಶ್ರೀಮತಿ ಎಎಸ್ಬಿಕೆ (ನವೆಂಬರ್ 24, 1944) ಶ್ರೀ ಎಬಿಕೆಐ (ಹುಟ್ಟಿದ ದಿನಾಂಕ ಜುಲೈ 9, 1944), ಶ್ರೀಮತಿ ಪಿಎಎಸ್ (ಹುಟ್ಟಿದ ದಿನಾಂಕ ನವೆಂಬರ್ 2, 1983), ಶ್ರೀಮತಿ ಆರ್‌‌ಎಎಸ್ (ನವೆಂಬರ್ 22, 1973), ಶ್ರೀಎಪಿಎಸ್ (ನವೆಂಬರ್ 27, 1944), ಶ್ರೀಮತಿ ಎಡಿಎಸ್ (ಹುಟ್ಟಿದ ದಿನಾಂಕ ಆಗಸ್ಟ್ 14, 1949) ಶ್ರೀ ಎಂಎಲ್ ಎ (ಹುಟ್ಟಿದ ದಿನಾಂಕ 20, 1935) ಶ್ರೀ ಎನ್ ಎಂ ಎ (ಹುಟ್ಟಿದ ದಿನಾಂಕ 21, 1968) ಮತ್ತು ಶ್ರೀ ಎಂಎಂಎ (ಹುಟ್ಟಿದ ದಿನಾಂಕ ಜೂನ್ 27, 1973).

      ಹೆಸರು, ಜನ್ಮದಿನ ಹೊರತುಪಡಿಸಿ ನೋಟಿಸ್‌ನಲ್ಲಿ ಇತರ ವಿವರ ಬ್ಯಾಂಕ್‌ ಬಹಿರಂಗಗೊಳಿಸಿಲ್ಲ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap