ಬೆಂಗಳೂರು :
ರಾಜ್ಕುಮಾರ್ ಕುಟುಂಬ ಯುವ ರಾಜ್ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಮದುವೆ ಅದ್ಧೂರಿಯಾಗಿ ನೆರವೇರಿದೆ. ಬೆಳಗ್ಗೆ 10:00 ಗಂಟೆಯ ಶುಭ ಮುಹೂರ್ತ ಕಟಕ ಲಗ್ನದಲ್ಲಿ ಶ್ರೀದೇವಿ ಅವರನ್ನು ಯುವ ರಾಜ್ಕುಮಾರ್ ವರಿಸಿದ್ದಾರೆ.
ಪುನೀತ್ ರಾಜ್ಕುಮಾರ್,ಶಿವರಾಜ್ ಕುಮಾರ್ ಸೇರಿ ರಾಜ್ ಕುಟುಂಬದವರು ಮತ್ತು ಚಿತ್ರರಂಗದ ಆಪ್ತರು ಪಾಲ್ಗೊಂಡಿದ್ದಾರೆ. ವಕ್ಕಲಿಗ ಸಂಪ್ರದಾಯದಂತೆ ಮದುವೆ ಶಾಸ್ತ್ರ ನೆರವೇರಿದೆ. ಇಂದು ಸಂಜೆ 7 ಗಂಟೆಗೆ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಮೊದಲಿನಿಂದಲೂ ರಾಜ್ಕುಮಾರ್ ಕುಟುಂಬ ಟಾಲಿವುಡ್, ಕಾಲಿವುಡ್ ಕಲಾವಿದರ ಜೊತೆ ಗೆಳೆತನ ಹೊಂದಿದೆ. ಹಾಗಾಗಿ, ಇಂದು ಮದುವೆಗೆ ಸ್ಯಾಂಡಲ್ವುಡ್, ಟಾಲಿವುಡ್, ಕಾಲಿವುಡ್ ತಾರೆಯರು ಆಗಮಿಸುವ ಸಾಧ್ಯತೆ ಇದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ