ಅನುಭವ ಮಂಟಪದ ಪುನಶ್ಚೇತನಕ್ಕೆ ಸರ್ಕಾರ ಬದ್ಧ: ಸಿಎಂ ಯಡಿಯೂರಪ್ಪ

ಬೆಂಗಳೂರು: 

     ಬಸವಣ್ಣನವರ ಅನುಭವ ಮಂಟಪದ‌ ಪುನಶ್ಚೇತನಕ್ಕೆ ಸರ್ಕಾರ ಬದ್ಧವಾಗಿದೆ. ಈಗಾಗಲೇ ಬಜೆಟ್​ನಲ್ಲಿ ಇದಕ್ಕೆ ಅನುದಾನ ಮೀಸಲಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

    ಬಸವ ಸಮಿತಿ ವತಿಯಿಂದ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಸಮ ಸಮಾಜದ ನಿರ್ಮಾಣದ ಕನಸನ್ನು‌ 12 ನೇ ಶತಮಾನದಲ್ಲಿಯೇ ಬಿತ್ತಿದವರು ಬಸವಣ್ಣ. ಕಾಯಕವೇ ಕೈಲಾಸ ಎಂದು‌ ದುಡಿಮೆಯ ಮಹತ್ವ ಮತ್ತು ಶ್ರಮಿಕರ ಮಹತ್ವವನ್ನು, ಶ್ರಮಿಕರ‌ ಶ್ರೇಷ್ಠತೆಯನ್ನು ಸಾರಿದವರು. ಸರಳ ವಚನಗಳ ಮೂಲಕ ಸಮಾನತೆ, ಕಾಯಕ, ದಾಸೋಹದ ಮಹತ್ವ ಸಾರಿದವರು ಎಂದು ಬಣ್ಣಿಸಿದರು.

    “ಪ್ರಪಂಚದ ಸಾಹಿತ್ಯಕ್ಕೆ ವಚನ ಸಾಹಿತ್ಯ ಶರಣರ ಶ್ರೇಷ್ಠ ಕೊಡುಗೆ. ಬಸವಣ್ಣನವರ ತತ್ವಗಳನ್ನು ಸ್ವಲ್ಪವಾದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಾವು ಮುಂದೆ ಸಾಗಬೇಕಿದೆ. ಸರ್ಕಾರ ಬಸವಣ್ಣನವರ ಅನುಭವ ಮಂಟಪದ‌ ಪುನಶ್ಚೇತನಕ್ಕೆ ಬದ್ಧವಾವಾಗಿದೆ. ಈಗಾಗಲೇ ಬಜೆಟ್ ನಲ್ಲಿ ಇದಕ್ಕೆ ಅನುದಾನ ಮೀಸಲಿಟ್ಟಿದ್ದೇವೆ,” ಎಂದು ಬಿಎಸ್​ವೈ ಹೇಳಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link