ಹುಲಿ ದಾಳಿಗೆ ರೈತ ಬಲಿ

ಚಾಮರಾಜನಗರ:

ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಸಮೀಪ ಶನಿವಾರ ಸಂಜೆ ರೈತರೊಬ್ಬರು ಹುಲಿ ದಾಳಿಗೆ ಬಲಿಯಾಗಿದ್ದಾರೆ.   ಚೌಡಹಳ್ಳಿ ಗ್ರಾಮದ ಶಿವಮಾದಯ್ಯ (66) ಹುಲಿ ದಾಳಿಯಿಂದ ಸಾವಿಗೀಡಾದ ರೈತ.

ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯದ ಬರಕಟ್ಟೆ ಸಮೀಪ  ಶನಿವಾರ ಸಂಜೆ ಎತ್ತುಗಳೊಂದಿಗೆ ಗ್ರಾಮಕ್ಕೆ ಬರುವಾಗ ಹುಲಿ ದಾಳಿ ಮಾಡಿದೆ.  ಎತ್ತುಗಳು ಮಾತ್ರ ಮನೆಗೆ ಹಿಂದುರಿಗಿದ ಬಗ್ಗೆ ಸಂಶಯಗೊಂಡ ಗ್ರಾಮಸ್ಥರು ಭಾನುವಾರ ಬೆಳಗ್ಗೆ ಹುಡುಕಾಟ ನಡೆಸಿದಾಗ  ಶಿವಮಾದಯ್ಯ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ  ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ