ಚಿಕ್ಕಮಗಳೂರು :
ಪ್ರೇಯಸಿ ಕೈಕೊಟ್ಟಳೆಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಬಳಿಯ ಹಿರೇಬೈಲ್ ನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ಸತೀಶ್ (29) ಎಂದು ಗುರುತಿಸಲಾಗಿದೆ.ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮದವ . ಈತ ಪ್ರೀತಿಸುತ್ತಿದ್ದ ಯುವತಿ ಮದುವೆ ಆಗುತ್ತೇನೆಂದು ಮೃತ ಸತೀಶ್ನಿಗೆ ಮಾತು ಕೊಟ್ಟಿದ್ದಳು. ನಂತರ ಆಕೆ ನಿರಾಕರಿಸಿದ್ದಾಳೆಂದು ಮನನೊಂದು ಸತೀಶ್ ಮೊಬೈಲ್ನಲ್ಲಿ ಸ್ನೇಹಿತರಿಗೆ ಡೆತ್ ನೋಟ್ ಸಂದೇಶ ರವಾನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಾನು ಅವಳಿಗೆ ಬಿಎಸ್ಸಿ ನರ್ಸಿಂಗ್ ಮಾಡಿಸಿದೆ. ನನ್ನ ಸಾವಿಗೆ ಪವಿತ್ರಳೇ ಕಾರಣ ದಯವಿಟ್ಟು ಅವಳಿಗೆ ತಕ್ಕ ಶಿಕ್ಷೆಆಗಬೇಕು. ನಮ್ಮ ಮನೆಯವರಿಗೆ ಏನು ಹೇಳಿಲ್ಲ ದಯವಿಟ್ಟು ಹೇಳಿ ಎಂದು ಹಿರೇಬೈಲ್ ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಾಟ್ಸಪ್ನಲ್ಲಿ ಸಂದೇಶ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ