ಬರ ಪರಿಹಾರಕ್ಕೆ ಪ್ರಧಾನಿಯನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

ನವದೆಹಲಿ:

     ಕೇಂದ್ರ ಸರ್ಕಾರವೂ ಆರ್ಥಿಕ ನೆರವಿಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿಗೆ ಮನವಿ ಸಲ್ಲಿಸಿದರು.

   ದೆಹಲಿಯ ಲ್ಲಿನ ಪ್ರಧಾನಿಯವ ಗೃಹಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ, ರಾಜ್ಯದ ಬರ ಪರಿಸ್ಥಿತಿ ಕುರಿತು ಅವರಿಗೆ ಮನವರಿಕೆ ಮಾಡಿಕೊಟ್ಟರು. ರಾಜ್ಯವೂ ಬರ ಪರಿಸ್ಥಿತಿಯಿಂದ ತತ್ತಾರಿಸಿದ್ದು , ರಾಜ್ಯದಲ್ಲಿ 150ಕ್ಕೂ ಹೆಚ್ಚು ತಾಲೂಕುಗಳು ನಿರಂತರ ಬರಕ್ಕೆ ತುತ್ತಾಗಿದೆ. ಇದರಿಂದ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಉದ್ಭವಿಸಿದೆ. ರಾಜ್ಯ ಈ ಬಾರಿ ಕೃಷಿ ಚಟುವಟಿಕೆಗೆ ತೊಡಗಾಗಿದೆ. ಇದರ ನಿವಾರಣೆಗಾಗಿ ಪರಿಹಾರ ನೀಡುವಂತೆ ಕೋರಿಕೊಂಡರು.

  ರಾಜ್ಯ ಈ ಬಾರಿ ಬರ ಹಾಗೂ ಪ್ರವಾಹಕ್ಕೆ ತುತ್ತಾಗಿದೆ. ಇದರಿಂದಾಗಿ 32,335 ಕೋಟಿ ಆರ್ಥಿಕ ನಷ್ಟದಲ್ಲಿ ರಾಜ್ಯ ಸಿಲುಕಿದೆ. ಇದರಿಂದಾಗಿದೆ ರಾಜ್ಯದ ಅಭಿವೃದ್ಧಿ ಯೋಜನೆ ಹಾಗೂ ಕಲ್ಯಾಣ ಯೋಜನೆ ಮೇಲೆ ಕೂಡ ಇದು ಪರಿಣಾಮಬೀರಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನೆರವಿಗೆ ಕೇಂದ್ರ ಸರ್ಕಾರ ಮುಂದಾಬೇಕು ಎಂದು ಮನವಿ ಮಾಡಿದರು. 

  ರಾಜ್ಯದ ಎಸ್​ಡಿಆರ್​ಎಫ್​ ನಿಧಿ ಹೊರತು ಪಡಿಸಿ ರಾಜ್ಯ ಸರ್ಕಾರ 386 ಕೋಟಿ ಬಿಡುಗಡೆ ಮಾಡಿದೆ . ಅಲ್ಲದೇ ಪ್ರವಾಹ ಮತ್ತು ಬರಕ್ಕೆ ತುತ್ತಾದ ರೈತರು  ಸೇರಿದಂತೆ ಎಲ್ಲ ಬೆಳೆ ಸಾಲಮನ್ನಾ ಮಾಡಲಾಗಿದೆ, ಇದರ ಹೊರತಾಗಿ ಬರ ಪರಿಹಾರಕ್ಕಾಗಿ 2064 ಕೋಟಿ ಪರಿಹಾರ ಅಗತ್ಯವಿದ್ದು, ಈ ಹಣವನ್ನು ಎನ್​ಡಿಆರ್​ಎಫ್​ ಮೂಲಕ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.

  ಇದೇ ವೇಳೆ ನರೇಗಾ ಯೋಜನೆ ಹಣ ಬಿಡುಗಡೆಗೂ ಅವರು ಮನವಿ ಸಲ್ಲಿಸಿದರು. ನರೇಗಾ ಯೋಜನೆಗೆ ಕೇಂದ್ರ ಸರ್ಕಾರ ನೀಡುವ ಹಣ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರು ತೊಂದರೆಯಲ್ಲಿ ಸಿಲುಕಿದ್ದಾರೆ. ವೇತನ, ಬಾಕಿ ಹಣ 1315 ಕೋಟಿಯನ್ನು  ಬಿಡುಗಡೆ ಮಾಡುವಂತೆ  ಈಗಾಗಲೇ ಈ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಖುದ್ಧು ಮುಖ್ಯಮಂತ್ರಿಗಳು ಪ್ರಧಾನಿಯನ್ನು ಭೇಟಿಯಾಗಿ ಈ ಕುರಿತು ವಿವರಣೆ ನೀಡಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

     

Recent Articles

spot_img

Related Stories

Share via
Copy link
Powered by Social Snap