ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸಾಧ್ಯವಿಲ್ಲ:ಸುಬ್ರಹ್ಮಣ್ಯಂ ಸ್ವಾಮಿ

ನವದೆಹಲಿ: 

   ವಿವಾದಾತ್ಮಕ ಹೇಳಿಕೆಯನ್ನು ನೀಡಿ ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಚರ್ಚೆಯಲ್ಲಿದ್ದಾರೆ  ಇದೀಗ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ 220 ಅಥವಾ 230 ಸೀಟುಗಳ ಗೆಲುವಿಗೆ ಸೀಮಿತವಾದಲ್ಲಿ ಮೋದಿ ಎರಡನೇ ಬಾರಿಗೆ ಪ್ರಧಾನಿ ಪಟ್ಟ ಅಲಂಕರಿಸುವ ಸಾಧ್ಯತೆಗಳಿಲ್ಲ ಎಂದು ಹೇಳಿಕೆ ನೀಡಿ ಮೋದಿ ಮತ್ತು ಬಿಜೆಪಿ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. 

   ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 230 ಸೀಟುಗಳ ಹತ್ತಿರ ಗೆಲ್ಲಬಹುದಾಗಿದೆ.ಎನ್‌ಡಿಎ ಮೈತ್ರಿಕೂಟದ ಪಕ್ಷಗಳು 30 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಅದರಂತೆ ಎನ್‌ಡಿಎ ಮೈತ್ರಿಕೂಟ 250 ಸೀಟುಗಳನ್ನು ಗೆದ್ದಂತಾಗಲಿದೆ. ಸರಕಾರ ರಚಿಸಲು 30-40 ಸೀಟುಗಳ ಅವಶ್ಯಕತೆ ಎದುರಾಗಲಿದೆ. ಹೊಸ ಮೈತ್ರಿಕೂಟದ ಪಕ್ಷಗಳು ಮೋದಿಯನ್ನು ನಾವು ಪ್ರಧಾನಿಯಾಗಿ ನಾವು ಒಪ್ಪುವುದಿಲ್ಲ ಎಂದಲ್ಲಿ ಸಂಕಷ್ಟಗಳು ಎದುರಾಗಲಿವೆ.

ಲೋಕಸಭೆ ಚುನಾವಣೆ ಫಲಿತಾಂಶ ಬಂದ ನಂತರ ಬಿಎಸ್‌ಪಿ ಅಥವಾ ಬಿಜು ಜನತಾ ದಳ ಬಿಜೆಪಿಗೆ ಸರಕಾರ ರಚಿಸಲು ಬೆಂಬಲ ನೀಡುವ ಸಾಧ್ಯತೆಗಳಿವೆ. ಆದರೆ, ಬಿಜೆಡಿ ನಾಯಕ ನವೀನ್ ಪಟ್ನಾಯಕ್, ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗುವುದು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಾಯಾವತಿ ಕೂಡಾ ಉತ್ತರಪ್ರದೇಶದಲ್ಲಿ ಬಿಜೆಪಿಗೆ ವಿರುದ್ಧವಾಗಿ ಬಿಎಸ್‌ಪಿ ಪಕ್ಷವನ್ನು ಕಣಕ್ಕಿಳಿಸಿದ್ದಾರೆ. ಇಂತಹದರಲ್ಲಿ ಮೋದಿಯನ್ನು ಬೆಂಬಲಿಸುತ್ತಾರೆ ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಒಂದು ವೇಳೆ ಬಿಎಸ್‌ಪಿಗೆ ಬೆಂಬಲ ನೀಡಬಹುದು. ಆದರೆ, ನಾಯಕತ್ವ ಬದಲಾವಣೆ ಒತ್ತಡ ಹೇರುತ್ತದೆ ಎಂದಿದ್ದಾರೆ.
ಪ್ರಧಾನಿ ಮೋದಿಯ ಸ್ಥಾನಕ್ಕೆ ನಿತಿನ್ ಗಡ್ಕರಿ ಯೋಗ್ಯ ನಾಯಕರಾಗಿದ್ದಾರೆ. ಒಂದು ವೇಳೆ ಮೋದಿಯ ಬದಲಿಗೆ ಗಡ್ಕರಿ ಆಯ್ಕೆಯಾದಲ್ಲಿ ತುಂಬಾ ಸಂತೋಷ. ಗಡ್ಕರಿ ಕೂಡಾ ಪ್ರಧಾನಿ ಮೋದಿಯಂತೆ ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದಾರೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ತಿಳಿಸಿದ್ದಾರೆ.
   
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap