ಹೊಸಕೋಟೆ:
ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಟಾಟಾಏಸ್‍ನಲ್ಲಿ ಸಾಗಿಸುತ್ತಿದ್ದ 624 ಕೆಜಿ ರಕ್ತಚಂದನ ಮತ್ತು 80 ಕೆಜಿ ಶ್ರೀಗಂಧ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ತಾಲ್ಲೂಕು ಅರಣ್ಯ ಇಲಾಖೆ ವಲಯಾರಣ್ಯಾದಿಕಾರಿಗಳಾದ ವರುಣ್ ಮತ್ತು ಡಿ ಸಿ ಎಪ್ ಬೈರಾರೆಡ್ಡಿ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಉಪವಲಯ ಅರಣ್ಯಾಧಿಕಾರಿಗಳಾದ ಯೋಗೇಶ್ ಮತ್ತು ಸಿಬ್ಬಂದಿ ವರ್ಗದವರು ಈ ದಾಳಿ ನಡೆಸಿ ಮಾಲು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕನಹಳ್ಳಿ ಗೇಟ್ ಬಳಿ ಬರುತಿದ್ದ ಕೆ ಎ 14 ಬಿ 1576 ಟಾಟ ಏಸ್ ವಾಹನವನ್ನು ನಿಲ್ಲಿಸಲು ಅಧಿಕಾರಿಗಳ ತಂಡ ಸೂಚಿಸಿದರೂ ವಾಹನ ನಿಲ್ಲಿಸದೆ ವೇಗವಾಗಿ ಮುಂದೆ ಸಾಗಿದ್ದರಿಂದ ಎಚ್ಚೆತ್ತ ಅಧಿಕಾರಿಗಳು ಕೂಡಲೇ ವಾಹನವನ್ನು ಹಿಂಬಾಲಿಸಿದ್ದಾರೆ. ಈ ವೇಳೆ ಟಾಟಾ ಏಸ್‍ನಲ್ಲಿದ್ದ ಐವರು ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ.
ವಾಹನವನ್ನು ತಪಾಸಣೆ ಮಾಡಿದಾಗ 624 ಕೆಜಿ ರಕ್ತಚಂದನ 6 ಕೆಜಿ ತೂಕದ ಸುಮಾರು 80 ಕೆಜಿಯ 13 ಶ್ರೀಗಂಧದ ತುಂಡುಗಳು ಮತ್ತು ಮೂರು ಕತ್ತಿಗಳನ್ನು ವಶಪಡಿಸಿಕೊಂಡಿದ್ದು, ಇದರ ಮಾರುಕಟ್ಟೆ ಬೆಲೆ ಅಂದಾಜು 360000 ರೂಗಳಾಗಿವೆ. ಅರಣ್ಯಾಧಿಕಾರಿಗಳು ಪ್ರಕರಣ ಧಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ