ಕಲಬುರಗಿ:
ಯುವಕನ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿ, ಭೀಕರವಾಗಿ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ಸೋಮವಾರ ಮಧ್ಯೆರಾತ್ರಿ ನಡೆದಿದೆ.
ಈ ಘಟನೆಗೆ ಹಳೇಯ ವೈಷಮ್ಯವೇ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಕರಜಗಿ ಗ್ರಾಮದ 28 ವರ್ಷದ ಸೈಬಣ್ಣ ನೀಲಕಂಠ ತಳವಾರ (28) ಗುಂಡಿನ ದಾಳಿಗೆ ಬಲಿಯಾಗಿದ್ದು, ಅದೇ ಗ್ರಾಮದ ರವಿ ತಳವಾರ ಅಲಿಯಾಸ್ ಅಭಯ್ ಕೊಲೆ ಮಾಡಿದ ಆರೋಪಿ. ಸೋಮವಾರ ಮಧ್ಯೆರಾತ್ರಿ ಆರೋಪಿ ರವಿ, ಸೈಬಣ್ಣನ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾನೆ. ಪರಿಣಾಮ ಸೈಬಣ್ಣ ಗಂಭೀರವಾಗಿ ಗಾಯಗೊಂಡಿದ್ದಾನೆ.
ಘಟನೆ ತಿಳಿದ ಸ್ಥಳೀಯರು ತಕ್ಷಣವೇ ಸೈಬಣ್ಣನ್ನು ಬೈಕ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿತ್ತು. ಹೀಗಾಗಿ ಜಿಲ್ಲಾಸ್ಪತ್ರಗೆ ರವಾನೆ ಮಾಡಲು ಮುಂದಾಗುತ್ತಿದ್ದಾಗ ಸೈಬಣ್ಣ ಸಾವನ್ನಪ್ಪಿದ್ದಾನೆ.
ಹಳೆಯ ವೈಷಮ್ಯದಿಂದ ರವಿ ಸೈಬಣ್ಣನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆರೋಪಿಯು ಈ ಹಿಂದೆ ಅಕ್ರಮ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಿಪಿಐ ಮಹಾಂತೇಶ್ ಪಾಟೀಲ, ಪಿಎಸ್‍ಐ ಮಂಜುನಾಥ ಹೂಗಾರ ಭೇಟಿ ನೀಡಿ ಪರಿಶೀಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
