ಕೊಡಗು:
ಸಾಮಾನ್ಯವಾಗಿ ತಿಂಡಿ ತಿನುಸುಗಲಲ್ಲಿ ಕಲ್ಲು ಪೇಪರ್ ಸಿಗುವುವದು ಸಾಮಾನ್ಯ ಆದರೆ ಕೊಡುಗುನಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ತೆಗೆದುಕೊಂಡ ಕುಲ್ಫಿಯಲ್ಲಿ ಬ್ಲೇಡ್ ಪತ್ತೆಯಾಗಿರುವ ಘಟನೆ ಮಡಿಕೇರಿ ತಾಲೂಕಿನ ಆವಂದೂರಿನಲ್ಲಿ ನಡೆದಿದೆ.
ಆವಂದೂರು ನಿವಾಸಿ ರಮ್ಯ ಎಂಬುವರು ನಾಪೋಕ್ಲುನ ತಿಂಡಿ ತಯಾರಿಕಾ ಘಟಕವೊಂದರಲ್ಲಿ ತಯಾರಾಗಿದ್ದ ಕುಲ್ಫಿ ತೆಗೆದುಕೊಂಡು ತಿನ್ನುವಾಗ ಬ್ಲೇಡ್ ನಾಲಿಗೆಗೆ ತಾಗಿದೆ .
ಇದರಿಂದ ಕೂಡಲೇ ಎಚ್ಚೆತ್ತುಕೊಂಡಿದ್ದಾರೆ. ನಂತರ ಕುಲ್ಫಿ ತಯಾರಿಕಾ ಘಟಕಕ್ಕೆ ತಿಳಿಸಿದ್ದಾರೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
