ಮಧ್ಯ ಪ್ರದೇಶದ :
ಹಿರಿಯ ಐಪಿಎಸ್ ಅಧಿಕಾರಿ ರಾಜೇಂದ್ರ ಕುಮಾರ್ ಮಿಶ್ರಾ ಮನೆಯಿಂದ ಆಘಾತಕಾರಿ ಸುದ್ದಿಯೊಂದು ಹೊರ ಬಂದಿದೆ. ರಾಜೇಂದ್ರ ಮಿಶ್ರಾ ಕಳೆದ ಒಂದು ತಿಂಗಳಿಂದ ತಂದೆ ಶವವನ್ನು ಮನೆಯಲ್ಲಿಟ್ಟುಕೊಂಡು ತಂತ್ರ-ಮಂತ್ರದಲ್ಲಿ ನಿರತರಾಗಿದ್ದರಂತೆ. ರಾಜೇಂದ್ರ ಮಿಶ್ರಾ, ಭೋಪಾಲ್ ನ ಪೊಲೀಸ್ ಪ್ರಧಾನ ಕಚೇರಿಯ ಎಡಿಜಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜೇಂದ್ರ ಮಿಶ್ರಾ, ತಂದೆ ಶವವನ್ನು ಮನೆಯಲ್ಲಿಟ್ಟುಕೊಂಡು ಆಯುರ್ವೇದ ಚಿಕಿತ್ಸೆ ಹಾಗೂ ತಂತ್ರ-ಮಂತ್ರ ಮಾಡ್ತಿದ್ದರಂತೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯೊಂದು ಮಿಶ್ರಾ ತಂದೆ ಸಾವನ್ನಪ್ಪಿದ್ದಾರೆಂದು ದೃಢಪಡಿಸಿದೆ. ಆದ್ರೆ ರಾಜೇಂದ್ರ ಮಿಶ್ರಾ, ತಂದೆ ಸಾವನ್ನಪ್ಪಿಲ್ಲ, ಚಿಕಿತ್ಸೆ ನಡೆಯುತ್ತಿದೆ ಎಂದಿದ್ದಾರೆ.
ರಾಜೇಂದ್ರ ಮಿಶ್ರಾ ಮನೆಯಿಂದ ಕೆಟ್ಟ ವಾಸನೆ ಬರ್ತಿದ್ದು, ಇಬ್ಬರು ಎಸ್ಎಎಫ್ ಸೈನಿಕರು ಅಸ್ವಸ್ಥರಾಗಿದ್ದಾರೆ. ಜನವರಿ 13 ರಂದು ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಜನವರಿ 14 ರಂದು ಮಿಶ್ರಾ ತಂದೆ ಸಾವನ್ನಪ್ಪಿದ್ದಾರೆ. ಮಿಶ್ರಾ ತಂದೆ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದರು ಎಂದು ವೈದ್ಯರು ಹೇಳಿದ್ದಾರೆ. ಮಿಶ್ರಾ ಮಾತ್ರ ತಂದೆ ಜೀವಂತವಾಗಿದ್ದಾರೆ ಎನ್ನುತ್ತಿದ್ದಾರೆ. ತನಿಖೆ ನಂತ್ರವೇ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
