ಮುಂಬೈ :
ಸಾಂಕ್ರಮಿಕ ಕೊರೋನಾ ತಡೆ ಹಾಗೂ ಪರಿಹಾರ ಚಟುವಟಿಕೆಗಳಿಗಾಗಿ 500 ಕೋಟಿ ರು. ನೀಡುವುದಾಗಿ ಟಾಟಾ ಟ್ರಸ್ಟ್ ಘೋಷಿಸಿದೆ.
ಭಾರತ ಸೇರಿದಂತೆ ಇಡೀ ವಿಶ್ವವೇ ಕೊರೋನಾ ಹೊಡೆತದಿಂದ ಸಂಕಷ್ಟಕ್ಕೆ ಸಿಲುಕಿವೆ. ಇದಕ್ಕಾಗಿ ಪರಿಹಾರ ಕಾರ್ಯ ಕೈಗೊಳ್ಳುವ ಅಗತ್ಯವಿದೆ. ಈ ಸಂದರ್ಭದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗುವುದು ಕೆಲಸಗಳಿಗಿಂತ ಬಹು ಮುಖ್ಯವಾಗಿದೆ ಎಂದು ಟಾಟಾ ಟ್ರಸ್ಟ್ ಮುಖ್ಯಸ್ಥ ರತನ್ ಟಾಟಾ.
ಪ್ರತಿಪಾದಿಸಿದ್ದಾರೆ.ಟಾಟಾ ಗ್ರೂಪ್, ಟಾಟಾ ಸನ್ಸ್ ಸಂಸ್ಥೆಯಲ್ಲಿ ಶೇ.66ರಷ್ಟುಷೇರುಗಳನ್ನು ಹೊಂದಿರುವ ಟಾಟಾ ಟ್ರಸ್ಟ್, ಕೊರೋನಾ ವಿರುದ್ಧ ಹಗಲಿರುಳು ಶ್ರಮಿಸುತ್ತಿರುವ ವೈದ್ಯರು ಹಾಗೂ ಇತರ ಸಿಬ್ಬಂದಿಯ ಸುರಕ್ಷತೆಗಾಗಿ ಅಗತ್ಯವಿರುವ ಪರಿಕರಗಳು, ಕೊರೋನಾ ಪೀಡಿತರ ಗುಣಪಡಿಸಲು ಬೇಕಿರುವ ಉಸಿರಾಟದ ವ್ಯವಸ್ಥೆಗಳು, ತಲಾ ಪರೀಕ್ಷೆಯನ್ನು ಹೆಚ್ಚಿಸುವ ಸಲುವಾಗಿ ಪರೀಕ್ಷಾ ಕಿಟ್‌ಗಳ ಖರೀದಿಗಾಗಿ ಈ ಹಣ ಮೀಸಲಿಡುವುದಾಗಿ ಹೇಳಿದೆ.ಅಲ್ಲದೆ, ಸೋಂಕಿತರ ಚಿಕಿತ್ಸಾ ಸೌಕರ್ಯಗಳು, ಆರೋಗ್ಯ ಸಿಬ್ಬಂದಿ ಹಾಗೂ ಸಾಮಾನ್ಯ ಜನರ ಸುರಕ್ಷತಾಗೆ ಈ ಹಣವನ್ನು ಬಳಸಿಕೊಳ್ಳಬಹುದು ಎಂದು ಟಾಟಾ ಟ್ರಸ್ಟ್ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ