ಹುಬ್ಬಳ್ಳಿ:
ಕುಂದಗೋಳ ಉಪಚುನಾವಣೆಯ ಕಾವು ದಿನೇ ದಿನೇ ಹೆಚ್ಚುತ್ತಿದ್ದು,ಆರೋಪ-ಪ್ರತ್ಯಾರೋಪಗಳ ಮೂಲಕ ರಾಜಕಾರಣಿಗಳು ಮತದಾರರ ಮನವೊಲಿಸುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.
ಮೈತ್ರಿ ಸರ್ಕಾರದ ಕಿರುಕುಳದಿಂದ ಸಿ.ಎಸ್.ಶಿವಳ್ಳಿ ಪ್ರಾಣ ಕಳೆದುಕೊಂಡರು ಎಂದು ಆರೋಪಿಸಿದ್ದ ಶಾಸಕ ಶ್ರೀರಾಮುಲು ವಿರುದ್ಧ ತಿರುಗಿ ಬಿದ್ದ ಮೈತ್ರಿ ನಾಯಕರು ಸಂಸದ ವಿ.ಎಸ್ ಉಗ್ರಪ್ಪ ನೇತೃತ್ವದಲ್ಲಿ ಇಂದು ಪ್ರಕರಣ ದಾಖಲಿಸಲು ಸಿದ್ದತೆ ನಡೆಸಿದ್ದಾರೆ.
ಡಿಕೆಶಿ ಸೂಚನೆಯ ಮೇರೆಗೆ ಇಂದು ಶ್ರೀರಾಮುಲು ವಿರುದ್ದ ಕುಂದಗೋಳ ಪೊಲೀಸ್ ಠಾಣೆ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
