ಅಕ್ರಮವಾಗಿ ಗೋಕಟ್ಟೆ ಮುಚ್ಚಿ ಗ್ರಾಮಸ್ಥರಿಗೆ ತೊಂದರೆ : ಪ್ರತಿಭಟನೆ

ಕುಣಿಗಲ್ :   

   ರಾಜಕೀಯ ಬಲಾಢ್ಯರೊಬ್ಬರು ಅಕ್ರಮವಾಗಿ ಗೋಕಟ್ಟೆ ಮುಚ್ಚಿ ಗ್ರಾಮದಲ್ಲಿ ತೊಂದರೆ ಮಾಡುತ್ತಿದ್ದಾರೆಂದು ಆರೋಪಿಸಿ ಬೋರೇಗೌಡನಪಾಳ್ಯ ಹಾಗೂ ಮೆಣಸನಹಳ್ಳಿ ಗ್ರಾಮಸ್ಥರು ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೊಶ ವ್ಯಕ್ತಪಡಿಸಿದರು.

   ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಮೆಣನಸಹಳ್ಳಿ ದಾಖಲೆಯ ಸ.ನಂ. ೧೨/೩ರಲ್ಲಿ ೧.೦೪ ಗುಂಟೆ ಜಮೀನು ಪೈಕಿ ೧೬ಗುಂಟೆ ಕರಾಬು ಕಟ್ಟೆಯನ್ನು ಮುಚ್ಚಿ ಅಕ್ರಮವಾಗಿ ಶಾಸಕರ ಬಂಟನೆಂದು ಹೇಳಿಕೊಳ್ಳುವ ಚೇಲಾ ರಾಜಕಾರಣಿ ಬಳಸಿಕೊಳ್ಳುತ್ತಿದ್ದು ತಾಲ್ಲೂಕು ಸರ್ವೆ ಇಲಾಖೆ ೧೨/೩ರನ್ನು ಗ್ರಾಮಠಾಣ ಎಂದು ನಕ್ಷೆ ನೀಡಿ ಗಂಗರಂಗಯ್ಯ ಬಿನ್ ಗಂಗಬೋರಯ್ಯ ಎಂಬುವರಿಗೆ ಗ್ರಾ.ಪಂ.ಯವರು ಖಾತೆ ಮಾಡಿ ಕೊಟ್ಟಿದ್ದಾರೆಂದು ಗ್ರಾಮಸ್ಥರು ಆಕ್ರೊಶ ವ್ಯಕ್ತಪಡಿಸಿದರು.

   ಪತ್ರಿಭಟನಾಕಾರರನ್ನು ಕುರಿತು ಮಾತನಾಡಿದ ಮಾಜಿ ತಾ.ಪಂ. ಸ್ಥಾಯಿ ಅಧ್ಯಕ್ಷ ಜಗದೀಶ್ ತಾಲ್ಲೂಕಿನಲ್ಲಿ ಶಾಸಕರ ಹಿಂಬಾಲಕರು ಇಂತಹ ಕೆಲಸ ಮಾಡುವ ಮೂಲಕ ಜನರನ್ನ ದಿಕ್ಕು ತಪ್ಪಿಸುತ್ತಿದ್ದಾರೆ. ಅಧಿಕಾರಿಗಳು ಕಾನೂನು ಪಾಲಿಸದೆ ಬರೀ ಶಾಸಕರ ಕೈ ಗೊಂಬೆಯಾಗಿರುವುದು ದುರದೃಷ್ಟಕರ. ಇಂತಹ ಅನ್ಯಾಯಗಳು ಕನ್ನಡಿಯಂತಿದ್ದರೂ ತಹಸೀಲ್ದಾರ್ ಏತಕ್ಕಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಿಡಿಕಾರಿದ ಅವರು ಕೂಡಲೇ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

     ಪ್ರತಿಭಟನಾಕಾರರ ಮನವಿ ಸ್ವಿಕರಿಸಿ ಮಾತನಾಡಿದ ತಹಸೀಲ್ದಾರ್ ವಿಶ್ವನಾಥ್, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿಸಿ ಶೀಘ್ರದಲ್ಲಿ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನ ಕೈಬಿಟ್ಟರು.
ಬಿಳಿದೇವಾಲಯ ಆನಂದ್, ವರದರಾಜ್, ರಾಜು, ಗಂಗಮ್ಮ, ಬೋರೇಗೌಡ ಶಿವರಾಮ, ಬೋರಮ್ಮ, ಸವಿತಮ್ಮ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link