ಬಾಗಲಕೋಟೆ:
ಕೆರೆಯಲ್ಲಿ ಈಜಲು ಹೋದ ಯುವಕ ಮೃತಪಟ್ಟ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲ್ಲೊಳ್ಳಿಯಲ್ಲಿ ಮಂಗಳವಾರ ಸಂಭವಿಸಿದೆ. ಮೃತಪಟ್ಟ ಯುವಕನನ್ನು ಗ್ರಾಮದ ರವಿ ಮಾರುತಿ ಭಜಂತ್ರಿ (21) ಎಂದು ಗುರುತಿಸಲಾಗಿದೆ.
ಯುವಕ ರವಿ, ಸೊಂಟಕ್ಕೆ ಡಬ್ಬಿ ಕಟ್ಟಿಕೊಂಡು ಕೆರೆಯಲ್ಲಿ ಈಜುತಿತ್ತ. ಕೆರೆಯ ಮಧ್ಯೆ ಹೋದಾಗ ಡಬ್ಬಿಯ ಹಗ್ಗ ಬಿಚ್ಚಿದ್ದು, ಇದರಿಂದ ಈಜು ಬಾರದೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ದೀಪಾವಳಿ ಪಾಡ್ಯದಂದು ಮನೆಯಲ್ಲಿ ಪೂಜೆಯಲ್ಲಿ ತೊಡಗಿದ್ದ ಗ್ರಾಮಸ್ಥರು, ಘಟನೆ ಸುದ್ದಿ ತಿಳಿದು, ಕೆರೆಯತ್ತ ಧಾವಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ